Bangalore, ಮೇ 16 -- ಬೆಂಗಳೂರು: ಓ ಚಿಟ್ಟೆ, ಬಣ್ಣದ ಚಿಟ್ಟೆ. ನೋಡೋಕೋ ಇದು ಎಂಥ ಚೆನ್ನಾ ಎನ್ನುವ ಬೇಬಿ ಶಾಮಿಲಿ ಅಭಿನಯದ ಹಾಡು ನೆನಪಿರಬಹುದು. ಚಿಟ್ಟೆ ಕಂಡವರಿಗೆ ಇಂತಹ ಹಾಡು,ಖುಷಿಯ ಕ್ಷಣ ಮನಸಿನಲ್ಲಿ ಥಟ್ಟನೆ ಬರುವುದು ಸಾಮಾನ್ಯ. ಈಗ ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಹಾಗೆಯೇ ಆಗುತ್ತಿದೆ. ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮೋಡಗಳ ಆಟ, ಮಳೆಯ ಸಿಂಚನ, ರಾತ್ರಿ ವೇಳೆ ಅಬ್ಬರದ ಸನ್ನಿವೇಶ ಬಿಸಿಲ ನಡುವೆಯೇ ಕೂಲ್‌ ಕೂಲ್‌ ವಾತಾವರಣವನ್ನು ಸೃಷ್ಟಿಸುತ್ತಿದೆ. ಬೇಸಿಗೆ ಮುಗಿದು ಮಳೆಗಾಲವನ್ನು ಬರ ಮಾಡಿಕೊಳ್ಳುವ ಸಂದರ್ಭದಲ್ಲಿರುವಾಗ ಈಗ ಪ್ರಕೃತಿಯಲ್ಲೂ ಬದಲಾವಣೆ ಆಗುತ್ತಿದೆ. ಇಂತಹ ಬದಲಾವಣೆ ಚಿಟ್ಟೆಗಳಿಂದಲೂ ನಮ್ಮ ಅರಿವಿಗೆ ಬರಬಹುದು. ಬೆಂಗಳೂರಿನ ಉದ್ಯಾನಗಳು ಮಾತ್ರವಲ್ಲ. ಹಲವು ಬಡಾವಣೆಗಳಲ್ಲೂ ಸಾಲಾಗಿ ಹಾರುತ್ತಿರುವ ಇಲ್ಲವೇ ಗಿಡ, ವಾಹನಗಳ ಮೇಲೆ ಕುಳಿತ ಚಿಟ್ಟೆಗಳ ಸೌಂದರ್ಯವನ್ನು ಈಗ ಕಣ್ತುಂಬಿಕೊಳ್ಳಬಹುದು.

ಅದರಲ್ಲೂ ನೀಲಿ ಹುಲಿ ಚಿಟ್ಟೆಗಳ ಹಿಂಡುಗಳು ಬೆಂಗಳೂರು ನಗರದಲ್ಲಿ ಹಾರಾಡುತ್ತಿದ್ದು, ನಿವಾಸಿಗಳು ಮತ್ತು ಪ...