ಭಾರತ, ಏಪ್ರಿಲ್ 29 -- ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ, ಎಂಇಎಸ್ ಕಲಾವೇದಿ ಮತ್ತು ರೋಟರಿ ಬೆಂಗಳೂರು ವಿದ್ಯಾರಣ್ಯಪುರ ಇವರ ಸಹಯೋಗದಲ್ಲಿ ಮೇ 3 ರಂದು ಸಂಜೆ 4 ಗಂಟೆಗೆ ಕನ್ನಡ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಷ್ಟಾವಧಾನಿ ವಿದ್ವಾನ್ ಗಣೇಶ ಭಟ್ಟ ಕೊಪ್ಪಲತೋಟ ಭಾಗವಹಿಸಲಿದ್ದಾರೆ.
ಭಾರತೀಯ ಪರಂಪರೆಯ ವಿಶಿಷ್ಟ ಮತ್ತು ಅಪರೂಪದ ಕಲೆ 'ಅವಧಾನ'. ಇದು ವಿಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಅವಧಾನ ಪದದ ಅರ್ಥ ಏಕಾಗ್ರತೆ. ಅಂತೆಯೇ ಇದನ್ನು ಸಾಧಿಸುವ ಕಲಾವಿದ ಅಥವಾ ಕಲಾವಿದೆಯನ್ನು ಅವಧಾನಿ ಎಂದು ಕರೆಯಲಾಗುತ್ತದೆ.
ಅಪಾರವಾದ ವಿದ್ವತ್ತಿನ ಬುನಾದಿಯ ಮೇಲೆ ನಿಂತಿರುವ ಈ ಸೃಜನಶೀಲ ಕಲೆಯು ಪಾಂಡಿತ್ಯ, ಕಾವ್ಯಶಕ್ತಿ ಮತ್ತು ತೀವ್ರ ಏಕಾಗ್ರತೆಯ ಅದ್ಭುತ ಸಂಗಮವಾಗಿದೆ. ಹಾಗೇ ಅವಧಾನಿಗೆ ಸಮಯ ಸ್ಫೂರ್ತಿ ಮತ್ತು ಹಾಸ್ಯಪ್ರಜ್ಞೆಯೂ ಅವಶ್ಯವಾಗಿರುತ್ತದೆ.
ಅವಧಾನದಲ್ಲಿ ಶ್ರವಣ, ಮನನ, ಧಾರಣೆ ಹಾಗೂ ತ್ವರಿತ ತಾರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.