ಭಾರತ, ಏಪ್ರಿಲ್ 7 -- ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪ್ರತಿ ವರ್ಷವೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಆಗಿದೆ. ಇದೀಗ, ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿದ್ಧತೆಗಳು ಮಹತ್ವದ ಹೆಜ್ಜೆ ಇಟ್ಟಿವೆ. ನಗರದ ಬಹುನಿರೀಕ್ಷಿತ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಪರಿಶೀಲಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡವು ಈ ವಾರ ಕರ್ನಾಟಕಕ್ಕೆ ಭೇಟಿ ನೀಡಲಿದೆ.

ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಶಾರ್ಟ್ಲಿಸ್ಟ್ ಆಗಿದೆ. ಶಾರ್ಟ್ಲಿಸ್ಟ್ ಮಾಡಲಾದ ಸ್ಥಳಗಳ ಸೂಕ್ತತೆಯನ್ನು ನಿರ್ಣಯಿಸಲು ಎಎಐ ತಂಡವು ಏಪ್ರಿಲ್ 7 ರಿಂದ 9 ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ.

ಕನಕಪುರ ರಸ್ತೆ ನಿವೇಶನಗಳು ಕ್ರಮವಾಗಿ 4,800 ಮತ್ತು 5,000 ಎಕರೆಗಳನ್ನು ಒಳಗೊಂಡಿದ್ದರೆ, ನೆಲಮಂಗಲ-ಕುಣಿಗಲ್ ರಸ್ತೆ ಸ್ಥಳವು ಸುಮಾರು 5,200 ಎಕರೆಗಳಷ್ಟು ವ್ಯಾಪಿಸಿದೆ. ಈ ಶಾರ್ಟ್...