ಭಾರತ, ಫೆಬ್ರವರಿ 13 -- BWSSB Adalat Today: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಇಂದು (ಫೆ 13) ನೀರಿನ ಅದಾಲತ್ ನಡೆಯಲಿದೆ. ವಿಶೇಷವಾಗಿ, ಉತ್ತರ-2-1, ದಕ್ಷಿಣ-1-1, ದಕ್ಷಿಣ-2-1, ನೈರುತ್ಯ -1, ನೈರುತ್ಯ - 4, ಪೂರ್ವ -1-2, ಪೂರ್ವ -2-2, ಆಗ್ನೇಯ - 2, ಆಗ್ನೇಯ - 5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆಬ್ರವರಿ 13 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿಗರು ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಬೆಂಗಳೂರು ಜಲ ಮಂಡಳಿಯ ಆಯಾ ಭಾಗದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಹವಾಲು ಸಲ್ಲಿಸಬಹುದು. ದೂರವಾಣಿ ಸಂಖ್ಯೆಗಳ ವಿವರ ಹೀಗಿದೆ - ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್, ಅಟ್ಟೂರು ಸೇವಾ ಠಾಣೆಯ ದೂರವಾಣಿ ಸಂಖ್ಯೆ...