ಭಾರತ, ಫೆಬ್ರವರಿ 17 -- BWSSB Updates: ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ಕುಡಿಯುವುದಕ್ಕೆ ಹೊರತಾಗಿ ಅನ್ಯ ಉದ್ದೇಶಗಳಿಗೆ ಬಳಸಬಾರದು. ವಾಹನ ತೊಳೆಯುವುದು ಸೇರಿ ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ ಹಾಗೂ ಇತರೆ ಉದ್ದೇಶಗಳಿಗೆ ಕಾವೇರಿ ನೀರು ಬಳಸಿದರೆ 5000 ರೂಪಾಯಿ ದಂಡ ಪಾವತಿಸಬೇಕಾದೀತು ಎಂದು ಬೆಂಗಳೂರು ಜಲಮಂಡಳಿ ಸೋಮವಾರ (ಫೆ 17) ಎಚ್ಚರಿಸಿದೆ. ಬೇಸಿಗೆ ಶುರುವಾಗಿದ್ದು, ಕಾವೇರಿ ನೀರನ್ನು ಅಗತ್ಯ ಉದ್ದೇಶಕ್ಕೆ ಬಳಸಬೇಕೇ ಹೊರತು, ಅನ್ಯ ಉದ್ದೇಶಗಳಿಗಲ್ಲ. ಈ ಬಗ್ಗೆ ಈಗಲೇ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಮಂಡಳಿ ಬೆಂಗಳೂರಿಗರಲ್ಲಿ ಮನವಿ ಮಾಡಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆ, ರಸ್ತೆ ನಿರ್ಮಾಣ ಮತ್ತು ಸ್ವಚ...