ಭಾರತ, ಮಾರ್ಚ್ 9 -- BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಮಾರ್ಚ್ 31ರ ಒಳಗೆ 100 ರೂಪಾಯಿ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿಬಿಡಿ. ಏಪ್ರಿಲ್ 1ರಿಂದ ಶೇಕಡ 100 ದಂಡ ಪಾವತಿಸಬೇಕಾದೀತು ಎಂದು ಲೆಕ್ಕಾಚಾರ ಸಹಿತ ಬೆಂಗಳೂರಿಗರನ್ನು ಬಿಬಿಎಂಪಿ ಎಚ್ಚರಿಸಿದೆ.

ಆಸ್ತಿ ತೆರಿಗೆ ಸುಸ್ತಿದಾರರು ದಂಡ ಪಾವತಿ ತಪ್ಪಿಸಿಕೊಳ್ಳುವುದಕ್ಕೆ ಮಾರ್ಚ್‌ 31ರ ತನಕ ಕಾಲಾವಕಾಶ ಇದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು, ವಿಶೇಷವಾಗಿ ಎಸ್‌ಎಎಸ್‌ ಅರ್ಜಿ ಸಂಖ್ಯೆ ಹೊಂದಿದವರು ಮಾರ್ಚ್‌ 31ರ ಒಳಗೆ ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಪಾವತಿಸಬೇಕು. ಹೀಗೆ ತೆರಿಗೆ ಪಾವತಿಸುವಾಗ 100 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಅಕಸ್ಮಾತ್ ಮಾರ್ಚ್ 31ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ದರೆ, ಆಗ ಏಪ್ರಿಲ್ 1 ರಿಂದ ಪಾವತಿಸುವಾಗ ಶೇಕಡ 100 ದಂಡ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಸಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಅದನ್ನು ಮಾರ್ಚ್‌ 31ರ ಒಳಗೆ ಪಾವತಿಸದೇ ಇದ...