ಭಾರತ, ಫೆಬ್ರವರಿ 18 -- Coffee Price Hike: ಬೆಲೆ ಏರಿಕೆಯ ಬಿಸಿ ಒಂದೊಂದಾಗಿ ಬೆಂಗಳೂರಿಗರನ್ನು ತಟ್ಟತೊಡಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬೆಂಗಳೂರು ಮೆಟ್ರೋ ಬೆಲೆ ಏರಿಕೆಯಿಂದ ಹಣಕಾಸು ಸರಿದೂಗಿಸುವ ಕಸರತ್ತಿನಲ್ಲಿರುವ ಬೆಂಗಳೂರಿನ ಬಡ ಮಧ್ಯಮವರ್ಗಕ್ಕೆ ಮಾರ್ಚ್‌ ಮೊದಲ ವಾರದಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹೋಟೆಲ್‌ಗೆ ಹೋಗಿ ಬೈಟು ಕಾಫಿ ಕುಡಿಯೋಣ ಅಂದ್ರೂ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ.

ಕರ್ನಾಟಕ ಬಜೆಟ್ ಮುಗಿದ ಕೂಡಲೇ ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಎಂಎಫ್ ಹಾಗೂ ಸರ್ಕಾರದ ಮೂಲಗಳು ಹೇಳುತ್ತಿವೆ. ಇನ್ನೊಂದೆಡೆ, ಮಾರ್ಚ್‌ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಾಫಿ ದರ 3 ರಿಂದ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.

ಕಾಫಿ ಪುಡಿಯ ದರ ದಿನೇದಿನೆ ಏರಿಕೆಯಾಗುತ್ತಿದ್ದು, ಹೋಟೆಲ್‌ಗಳಲ್ಲಿ ಕಾಫಿ ತಯಾರಿಕಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಮಾರ್ಚ್‌ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್‌ಗಳಲ್ಲಿ...