ಭಾರತ, ಫೆಬ್ರವರಿ 16 -- BESCOM Updates: ಬೆಂಗಳೂರಿನ ವಿವಿಧೆಡೆ ಮಂಗಳವಾರ (ಫೆ 18) ಪವರ್‌ ಕಟ್ ಇರಲಿದೆ. ಬೆಸ್ಕಾಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೆಪಿಟಿಸಿಎಲ್ ಕೈಗೆತ್ತಿಕೊಳ್ಳುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಅಂತಹ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಬಹುತೇಕ 66/11 ಕೆವಿ ವಿದ್ಯುತ್ ಸ್ಟೇಷನ್‌ಗಳಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತವೆ.

ಮಂಗಳವಾರ ಬೆಳಿಗ್ಗೆ 10 ಗಂಟೆಯಿOದ ಮದ್ಯಾಹ್ನ 1 ಗಂಟೆಯವರೆಗೆ "66/11ಕೆ.ವಿ ಟೆಲಿಕಾಂ" ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ಹೊಸಹಳ್ಳಿ, ಬಿನ್ನಿ ಪೇಟೆ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ವಿವರ ಹೀಗಿದೆ-

ಹೊಸಹಳ್ಳಿ ಮುಖ್ಯರಸ್ತೆ, ಅರ್ಫತ್ ನಗರ ಪಾದರಾಯನಪುರ ಪೂರ್ವ ಮತ್ತು ಪಶ್ಚಿಮ, ದೇವರಾಜ ಅರಸ್ ನಗರ, ಸುಜಾತಾ ಟೆಂಟ್, ಜೆಜೆಆರ್ ನಗರ, ಹೆರಿಗೆ ಆಸ್ಪತ್ರೆ, ಸಂ...