ಭಾರತ, ಫೆಬ್ರವರಿ 13 -- ಕರ್ನಾಟಕ ಹಲವು ವೈಶಿಷ್ಟ್ಯಗಳ ತವರು. ಹಬ್ಬ, ಹರಿದಿನಗಳು ಬಂದ್ರೆ ಇಲ್ಲಿ ಸಂಭ್ರಮವೋ ಸಂಭ್ರಮ. ಹಳೆ ಮೈಸೂರು ಭಾಗದಲ್ಲಿ ಯುಗಾದಿ ಹಬ್ಬದ ಆಚರಣೆ ಬಹಳ ಭಿನ್ನ. ಯುಗಾದಿ ನಂತರ ಹೊಸ ತೊಡಕು ಆಚರಿಸಲಾಗುತ್ತದೆ. ಹೊಸ ತೊಡಕಿನಲ್ಲಿ ಬಗೆ ಬಗೆಯ ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಿ ಸವಿಯಲಾಗುತ್ತದೆ. ಈ ಬಾರಿ ಬೆಂಗಳೂರಿನಲ್ಲಿ ಹೊಸ ತೊಡಕಿನ ಸಲುವಾಗಿ ವಿಶೇಷ ಸ್ಪರ್ಧೆಯೊಂದು ನಡೆಯುತ್ತಿದೆ. ಈ ಸ್ಪರ್ಧೆ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರೂರಬಹುದು. ಅದೇನೆಂದ್ರೆ ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಯುಗಾದಿ ಹೊಸ ತೊಡಕಿನ ಸಲುವಾಗಿ ರಾಗಿ ಮುದ್ದೆ, ನಾಟಿ ಕೋಳಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ವರ್ಷ ಏಪ್ರಿಲ್‌ 7ರ ಭಾನುವಾರ ಈ ಸ್ಪರ್ಧೆ ನಡೆಯಲಿದೆ.

ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಗ್ರಾಮೀಣ ಸೊಡಗನ್ನು ಪಟ್ಟಣದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಮೊದಲ...