ಭಾರತ, ಮಾರ್ಚ್ 26 -- ಬೆಂಗಳೂರು: ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ. ಧಾರವಾಡದ ಪ್ರಶಾಂತ್‌ ಗುಡುಮಿ (41), ಬೆಂಗಳೂರಿನ ಬನಶಂಕರಿ ನಿವಾಸಿ ಮೌನಿಷ್‌ (36) ಮತ್ತು ಗದಗ ಜಿಲ್ಲೆಯ ರಾಜಶೇಖರ್‌ ಎಚ್‌. (41) ಬಂಧಿತ ವಂಚಕರು. ಇವರು ಪ್ರತಿಯೊಬ್ಬ ಆಕಾಂಕ್ಷಿಯಿಂದ ರೂ. 5 ಸಾವಿರದಿಂದ 10 ಸಾವಿರ ರೂ. ಪಡೆದು ಅಂಕಪಟ್ಟಿ ವಿತರಿಸುತ್ತಿದ್ದರು. ಈ ರೀತಿ 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಣೆ ಮಾಡಿದ್ದರು ಎಂಬ ಸ್ಫೋಟಕ ಅಂಶ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಕೊಂಡಿದ್ದರು. ರಾಜ್ಯ ಶಿಕ್ಷಣ ಮಂಡಳಿಯಿಂದ ಯಾವುದೇ ಮಾನ್ಯತೆ ಪಡೆಯದೇ ಇದ್ದರೂ ರಾಜ್ಯ ಶಿಕ್ಷಣ ಇಲಾಖೆ ನೀಡುವ ಶಿಕ್ಷಣಕ್ಕೆ ಸರಿ ಸಮಾನವಾಗಿರುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು. ಇವರು 350ಕ್ಕೂ ಹೆಚ್ಚು ನಕಲಿ ಅಂಕ...