ಭಾರತ, ಮಾರ್ಚ್ 19 -- ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಷ್ಟು ದುಡಿದ್ರೂ ದುಡ್ಡೇ ಉಳಿಯೋಲ್ಲ, ಹೇಗೆ ದುಡ್ಡು ಉಳಿಸಬೇಕು ಅಂತಾನೂ ಗೊತ್ತಿಲ್ಲ ಅಂತ ಸದಾ ದುಡ್ಡಿನ ಬಗ್ಗೆ ಚಿಂತಿಸ್ತೀರಾ. ನಿಮ್ಮ ಪಾಕೆಟ್ ಭದ್ರ ಇರಬೇಕು ಅಂದ್ರೆ ಇನ್ನು ಮುಂದೆ ತಪ್ಪದೇ ಟ್ರಾಪಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಿ. ಕೊಂಚ ಯಾಮಾರಿದ್ರೂ ನಿಮ್ಮ ಪಾಕೆಟ್ ಬರಿದಾಗೋದು ಖಂಡಿತ. ಇದ್ಯಾಕೆ ಹೀಗೆ ಹೇಳ್ತಾ ಇದಾರೆ ಅಂದ್ಕೋತೀರಾ, ಟ್ರಾಫಿಕ್ ದಂಡ ಇನ್ನು ಮುಂದೆ ದುಪ್ಪಟ್ಟಾಗಲಿದೆ.

ಮದ್ಯಪಾನ ಮಾಡಿ ಗಾಡಿ ಓಡಿಸುವುದು, ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸುವುದು, ಸೀಟ್ ಬೆಲ್ಟ್ ಇಲ್ಲದೇ ಕಾರ್ ಓಡಿಸುವುದು ಈ ಎಲ್ಲದ್ದಕ್ಕೂ ದುಪ್ಪಟ್ಟು ಹಣ ಪಾವತಿಸಬೇಕಿದೆ. ಮಾರ್ಚ್ 1, 2025 ರಿಂದ ಜಾರಿಗೆ ಬಂದ ಹೊಸ ಮೋಟಾರು ವಾಹನ ಅಪರಾಧಗಳು ಮತ್ತು ದಂಡಗಳ ಅನ್ವಯ ಹಿದೆ ದಂಡ ಎಷ್ಟಿತ್ತು, ಈಗ ಎಷ್ಟು ದಂಡ ಪಾವತಿಸಬೇಕು ಎನ್ನುವ ವಿವರ ಇಲ್ಲಿದೆ.

ಹಳೆಯ ದಂಡ: 1,000 ರಿಂದ 1,500‌‌

ಹೊಸ ದಂಡ: 10,000 ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ

ಪದೇ ಪದೇ ನಿಯಮ ಉಲ್ಲಂಘನೆ: 15,00...