ಭಾರತ, ಫೆಬ್ರವರಿ 5 -- Karnataka Weather: ವಿಪರೀತ ಮಳೆ, ಮೈ ನಡುಕದ ಚಳಿ ಆಯಿತು. ಬೆಂಗಳೂರಿಗರಿಗೆ ಇನ್ನು ಬಿಸಿಲಿನ ತಾಪ ಅನುಭವಿಸುವ ಪರಿಸ್ಥಿತಿ. ಹೌದು, ಬೆಂಗಳೂರಿನಲ್ಲಿ ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳವಾಗಿದೆ. ಇನ್ನೊಂದೆಡೆ, ಈವರೆಗೆ ಚಳಿಯಿಂದ ನಡುಗುತ್ತಿದ್ದ ಕರ್ನಾಟಕದ ವಿವಿಧ ಭಾಗದ ಜನ ನಿಧಾನವಾಗಿ ಬಿಸಿಲಿನ ತಾಪ ಎದುರಿಸತೊಡಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ತಾಪಮಾನ 4.5 ಡಿಗ್ರಿ ಸೆಲ್ಶಿಯಸ್‌ವರೆಗೂ ಹೆಚ್ಚಳವಾಗಿದೆ. ವಾಡಿಕೆಯಂತಾದರೆ ಶಿವರಾತ್ರಿ ಕಳೆದ ಬಳಿಕ ಬೇಸಿಗೆ ಶುರುವಾಗಬೇಕು. ಆದರೆ ಈ ಬಾರಿ ಹಾಗಲ್ಲ. ಅದಕ್ಕೂ ಮೊದಲೇ ಸೆಕೆ ಆನುಭವಕ್ಕೆ ಬರತೊಡಗಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದ್ದು ಸೆಕೆ ಇದುವರೆಗಿನ ಚಳಿಯನ್ನು ಬಿಡಿಸಿದೆ. ಸದ್ಯದ ಗರಿಷ್ಠ ತಾಪಮಾನವು ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ಅಧಿಕ ಎಂದು ಹವಾಮಾನ ಇಲಾಖ...