ಭಾರತ, ಮಾರ್ಚ್ 27 -- ಬೆಂಗಳೂರು ಸುತ್ತಮುತ್ತ ಸುಡುಬಿಸಲು ಜನರನ್ನು ಕಂಗೆಡುವಂತೆ ಮಾಡಿದೆ. ಎಳನೀರು ಕುಡಿದು ದಾಹ, ಆಯಾಸ ತೀರಿಸಿಕೊಳ್ಳೋಣ ಅಂದರೆ ಗಗನಮುಖಿಯಾಗಿದೆ ಎಳನೀರು ದರ. ಹೌದು, ಎಳನೀರು ದರ 60 ರೂಪಾಯಿ ದಾಟಿದೆ. ಬಹುತೇಕರು ಎಳನೀರು ಕುಡಿಯಲು ಬಯಸುತ್ತಾರಾದರೂ, ಅದರ ದರ ನೋಡಿ ಬಡ ಮಧ್ಯಮ ವರ್ಗದವರು ದೂರ ಸರಿದುಬಿಡುತ್ತಾರೆ. ಈ ಬೇಸಿಗೆಯಲ್ಲಂತೂ ಬೆಂಗಳೂರು ಮಾತ್ರ ಅಲ್ಲ, ಬಹುತೇಕ ಎಲ್ಲ ಕಡೆ ಎಳನೀರು ದರ 50 ರೂಪಾಯಿ ಗಡಿ ದಾಟಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಡಾಕ್ಟರ್ ಒಬ್ಬರು ಮಾಡಿದ ಕಾಮೆಂಟ್, ಎಳನೀರು ದರ ನಿಗದಿ ಮಾಫಿಯಾದ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.

ಎಳನೀರು ದರ ಅತಿಯಾಗಿ ಏರಿಕೆಯಾಗುತ್ತಿರುವ ವಿಚಾರ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರಲ್ಲಿ ಎಳನೀರು ದರ ದುಬಾರಿಯಾಗಿದೆ ಎಂಬ ವಿಚಾರವೂ ಪ್ರಸ್ತಾಪವಾಗಿತ್ತು. ಈ ಚರ್ಚೆಯಲ್ಲಿ ಭಾಗಿಯಾದ ಬೆಂಗಳೂರು ಮೂಲದ ಕಾರ್ಡಿಯೋಲಜಿಸ್ಟ್ ಡಾ ದೀಪಕ್ ಕೃಷ್ಣಮೂರ್...