ಭಾರತ, ಫೆಬ್ರವರಿ 18 -- Summer Health: ಬೆಂಗಳೂರು ತನ್ನ ಹೃದ್ಯ ಹವಾಮಾನಕ್ಕೆ ಹೆಸರುವಾಸಿ. ಆದಾಗ್ಯೂ ಈ ಬಾರಿ ಹವಾಮಾನ ವೈಪರೀತ್ಯ ಬೆಂಗಳೂರನ್ನು ಕಾಡಿದೆ. ರಾತ್ರಿ ವೇಳೆ ಚಳಿ, ಹಗಲು ಸುಡು ಬಿಸಿಲು ಇರುವಂತಹ ಈ ಹವಾಮಾನ ವೈಪರೀತ್ಯ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತಿದೆ. ಈಗಾಗಲೇ ಅನೇಕರಿಗೆ ಒಣಹವೆಯ ಕಾರಣ ಮೂಗಲ್ಲಿ ರಕ್ತ, ಸನ್‌ ಬರ್ನ್, ನಿರ್ಜಲೀಕರಣ ಮುಂತಾದ ಸಮಸ್ಯೆ ಕಂಡುಬಂದಿದ್ದು, ವೈದ್ಯರ ನೆರವಿನೊಂದಿಗೆ ಅದಕ್ಕೆ ಪರಿಹಾರ ಕಂಡುಕೊಳ್ಳಲಾರಂಭಿಸಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಅಂದರೆ, ಬೆಂಗಳೂರಲ್ಲಿ ಇನ್ನೂ ಕೆಲದಿನ ಬಿಸಿಲಾಘಾತ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಕಾರಣ, ಮೂಗಲ್ಲಿ ರಕ್ತ, ಸನ್‌ಬರ್ನ್‌ ತಪ್ಪಿಸಲು ಹಾಗೂ ಆರೋಗ್ಯ ಕಾಪಾಡಲು ಈ 10 ಟಿಪ್ಸ್‌ ಗಮನಿಸಬಹುದು.

1) ಸಾಕಷ್ಟು ನೀರು ಕುಡಿಯಿರಿ: ನೀರಡಿಕೆ ಆಗದೇ ಇದ್ದರೂ, ನಿತ್ಯ ಶರೀರಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಿರಿ. ಎಲ್ಲೇ ಹೋಗಿ, ಕೈಯಲ್ಲೊಂದು ನೀರಿನ ಬಾಟಲಿ ಜತೆಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ...