ಭಾರತ, ಏಪ್ರಿಲ್ 25 -- ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌, ಕಟೌಟ್ ತಡೆಗೆ ಸ್ಥಳೀಯಾಡಳಿತವು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ)ವನ್ನು ಜಾರಿಗೊಳಿಸಿದೆ. ಇದರಂತೆ, ಬ್ಯಾನರ್‌, ಫ್ಲೆಕ್ಸ್‌, ಕಟೌಟ್‌ ಅಳವಡಿಸುವವರು, ಅದರಲ್ಲಿರುವ ವ್ಯಕ್ತಿಗಳು, ಮುದ್ರಕರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಅವುಗಳ ತೆರವಿನ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಯಾವುದೇ ಕಟ್ಟಡ, ಭೂಮಿ, ರಚನೆ, ಗೋಡೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ ಹಾಗೂ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವಂತೆ ಇಲ್ಲ. ಇಂತಹ ಚಟುವಟಿಕೆಯನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 158 ರಂತೆ ನಿಷೇಧಿಸಲಾಗಿದೆ.

ಅಕಸ್ಮಾತ್ ಈ ರೀತಿ ಫ್ಲೆಕ್ಸ್‌, ಬ್ಯಾನರ್ ಕಟೌಟ್ ಹಾಗೂ ಯಾವುದೆ ಜಾಹೀರಾತು ...