ಭಾರತ, ಏಪ್ರಿಲ್ 2 -- ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲೆಡೆ ವೈರಲ್‌ ಆಗಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸಮಯದಲ್ಲಿ, 8 ವರ್ಷದ ಬಾಲಕಿಯೊಬ್ಬಳು (ಅನನ್ಯ ಯಾದವ್) ತನ್ನ ಶಾಲೆಯ ಚೀಲ (ಬ್ಯಾಗ್)‌ ಹಿಡಿದುಕೊಂಡು ಮನೆಯಿಂದ ಓಡಿಹೋಗುತ್ತಿರುವ ದೃಶ್ಯ ಇದಾಗಿತ್ತು. ಮನೆ ಕೆಡವುವ ಸಮಯದಲ್ಲಿ ಶಾಲೆಯ ಪುಸ್ತಕಗಳಿಗೆ ಏನೂ ಆಗಬಾರದೆಂದು ಪುಸ್ತಕಗಳಿದ್ದ ಶಾಲಾ ಚೀಲವನ್ನು ಹಿಡಿದು ಓಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ವೈರಲ್ ಆಗುತ್ತಿದೆ. ಹಲವು ಜನರು ಬಾಲಕಿಯ ಶಿಕ್ಷಣ ಪ್ರೇಮವನ್ನು ಕೊಂಡಾಡಿದರೆ, ಇನ್ನೂ ಕೆಲವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಅನನ್ಯ ವಿಷಯ ಅಲ್ಲಿ ಪ್ರಸ್ತಾಪವಾಗಿದೆ. ನ್ಯಾಯಮೂರ್ತಿ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ವಲ್ ಭೂಯಾನ್ ಈ ಕುರಿತು ಮಾತನಾಡಿದ್ದಾರೆ. "ಬುಲ್ಡೋಜರ್ ಬಳಸಿ ಸಣ್ಣ ಗುಡಿಸಲುಗಳನ್ನು ಕೆಡವುತ್ತ...