ಭಾರತ, ಏಪ್ರಿಲ್ 8 -- ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಕನ್ನಡ ಭಾಷಾ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ನಿರ್ಮಿಸಿದೆ. ಮಂಗಳವಾರ (ಏಪ್ರಿಲ್ 8, 2025) ಘೋಷಿಸಲಾದ ಈ ವರ್ಷದ ಕಿರುಪಟ್ಟಿಯಲ್ಲಿ ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದಿಸಿದ ಪುಸ್ತಕ 'ಹಾರ್ಟ್ ಲ್ಯಾಂಪ್ ' ಕೂಡ ಕಿರುಪಟ್ಟಿಗೆ ಸೇರ್ಪಡೆಯಾಗಿದೆ.

ದೀಪಾ ಭಸ್ತಿ ಅನುವಾದಿಸಿರುವ 'ಹಾರ್ಟ್ ಲ್ಯಾಂಪ್' ಪುಸ್ತಕವು 1990 ಮತ್ತು 2023 ರ ನಡುವೆ ಬಾನು ಮುಷ್ತಾಕ್ ಬರೆದ 12 ಸಣ್ಣ ಕಥೆಗಳ ಸಂಗ್ರಹವಾಗಿದೆ. ಇದಕ್ಕೂ ಮೊದಲು, ಅವರ ' ಹಸೀನಾ ಮತ್ತು ಅದರ್ ಸ್ಟೋರೀಸ್' ಎಂಬ ಸಣ್ಣ ಕಥೆಗಳ ಸಂಗ್ರಹದ ಇಂಗ್ಲಿಷ್ ಅನುವಾದವು 2024 ರ ಇಂಗ್ಲಿಷ್ ಪೆನ್ ಅನುವಾದ ಪ್ರಶಸ್ತಿಯನ್ನು ಗೆದ್ದಿದೆ ಆ ಪುಸ್ತಕವನ್ನು ದೀಪಾ ಭಸ್ತಿ ಅವರೇ ಅನುವಾದಿಸಿದ್ದಾರೆ.

ಇದನ್ನೂ ಓದಿ: ಈಕೆ ಖಾಸಗಿ ಕಾಲೇಜಲ್ಲೂ ಕಲೀಲಿಲ್ಲ, ಕೋಚಿಂಗ್ ಕೂಡ ಪಡೆದಿಲ್ಲ; ಕಾಣಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶ್...