Bengaluru, ಮೇ 12 -- ಬೌದ್ಧ ಧರ್ಮದ ಪವಿತ್ರ ಹಬ್ಬವಾದ ಬುದ್ಧ ಪೂರ್ಣಿಮಾವನ್ನು ಇಂದು (ಮೇ 12, ಸೋಮವಾರ) ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಬುದ್ಧ ಪೂರ್ಣಿಮಾವನ್ನು ಪ್ರತಿ ವರ್ಷ ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನವನ್ನು ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯಲಾಗುತ್ತದೆ. ಜ್ಯೋತಿಷಿ ಎಸ್.ಎಸ್.ನಾಗಪಾಲ್ ಅವರ ಪ್ರಕಾರ, ಬುದ್ಧ ಪೂರ್ಣಿಮೆ, ಭಗವಾನ್ ಗೌತಮ ಬುದ್ಧನ ಜನನ, ಜ್ಞಾನೋದಯದ ಸಾಧನೆ ಮತ್ತು ಅವರ ಪರಿನಿರ್ವಾಣದಂದು ಒಂದೇ ದಿನ ಮೂರು ಸಂಗತಿಗಳು ನಡೆದವು ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ಭಗವಾನ್ ಬುದ್ಧನ 2,587 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಥೈಲ್ಯಾಂಡ್, ಚೀನಾ, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ, ಜಪಾನ್, ಟಿಬೆಟ್ ಮುಂತಾದ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ.

ಸೂರ್ಯ, ಚಂದ್ರ ಹಾಗೂ ಸತ್ಯ ಈ ಮೂರು ವಿಷಯಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಗೌ...