ಭಾರತ, ಏಪ್ರಿಲ್ 6 -- ವೀಕೆಂಡ್ ಬಂತೆಂದರೆ ಸಾಕು ಮೋಜು ಮಸ್ತಿಯಲ್ಲಿ ತೊಡಗುವ ಜನರೇ ಹೆಚ್ಚು. ಆದರೆ ಕೆಲವೊಂದಿಷ್ಟು ಮಂದಿ ಅದರಿಂದ ಹೊರಬರಲು ಹೆಣಗಾಡುತ್ತಿದ್ದರೆ, ವಾರಾಂತ್ಯದಲ್ಲಿ ಬುದ್ಧಿವಂತ ಅಥವಾ ಯಶಸ್ವಿ ವ್ಯಕ್ತಿಗಳು ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇನ್ನು ಹಲವರದ್ದು. ಸ್ಮಾರ್ಟ್ ಪೀಪಲ್ಸ್ (ಬುದ್ಧಿವಂತ ವ್ಯಕ್ತಿ) ಸಮಯವನ್ನು ಚಿನ್ನವೆಂದು ಭಾವಿಸುತ್ತಾರೆ. ಈ ಪ್ರವೃತ್ತಿ ವಿಶೇಷವಾಗಿ ವಾರಂತ್ಯದಲ್ಲಿ 2 ರಜೆ ಪಡೆಯುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಆದರೆ ಸಮಯ ನಿಯಂತ್ರಿಸುವುದು ದೊಡ್ಡ ವಿಷಯವೇ ಅಲ್ಲ. ಯಶಸ್ವಿ ಜನರು ಸಮಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಇಲ್ಲಿದೆ.

ವಾರಂತ್ಯ ಬಂತೆಂದರೆ ಮಲಗಿದ್ದ ಬೆಡ್​ನಲ್ಲೇ ಮೊಬೈಲ್​ ಸ್ಕ್ರೋಲ್​ ಮಾಡುತ್ತಾ ಗಂಟೆಗಟ್ಟಲೆ ಸಮಯ ಹಾಳುವ ಜನರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಬುದ್ಧಿವಂತ ಜನರು ಅಮೂಲ್ಯ ಸಮಯವನ್ನು ನಿಷ್ಪ್ರಯೋಜಕ ವಿಷಯಗಳಿಗೆ ಮೀಸಲಿಡಲು ಬಯಸುವುದಿಲ್ಲ. ಸಾಮಾಜಿಕ ಮಾಧ್ಯಮದಿಂದಲೂ ಶಕ್ತಿಯುತ ವಿಷಯಗಳಿಂದ ಸದಾ ದೂರ ಇರುತ್ತಾರೆ. ಉಪಯುಕ್ತ ಕೆಲಸಗ...