ಭಾರತ, ಫೆಬ್ರವರಿ 9 -- ಫಾಸ್ಟ್ ಫುಡ್ (ಬೀದಿ ಬದಿ ಆಹಾರ) ಅಂದ್ರೆ ಬಹುತೇಕ ಮಂದಿ ಇಷ್ಟಪಟ್ಟು ತಿಂತಾರೆ. ಆದರೆ, ಈ ಆಹಾರವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬೀದಿ ಬದಿ ಆಹಾರ ಒಳ್ಳೆಯದಲ್ಲ, ಇದನ್ನು ತಯಾರಿಸುವ ವಿಧಾನವು ಅನಾರೋಗ್ಯಕರವಾಗಿದೆ ಎಂಬಂತಹ ಮಾತುಗಳನ್ನು ನೀವು ಕೇಳಿರಬಹುದು. ಇದೀಗ ಬ್ರೆಡ್ ಪಕೋಡದಲ್ಲಿ ಬಳಸುವ ಚೀಸ್ ಬಗ್ಗೆ ವ್ಯಕ್ತಿಯೊಬ್ಬರು ಸತ್ಯ ವಿಚಾರವನ್ನು ಬಹಿರಂಗಪಡಿಸುವ ವಿಡಿಯೊವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ್ರೆ, ಬೀದಿ ಬದಿಯಲ್ಲಿ ಆಹಾರ ತಿನ್ನುವ ಮೊದಲು ಹಲವು ಬಾರಿ ಯೋಚನೆ ಮಾಡಬಹುದು.

ಇನ್ಸ್ಟಾಗ್ರಾಂ ಬಳಕೆದಾರ ನಿಖಿಲ್ ಸ್ಪ್ರೆಡ್ಸ್ ಎಂಬುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 25 ರೂಪಾಯಿಗೆ ತೆಗೆದುಕೊಂಡ ಪನೀರ್ ಬ್ರೆಡ್ ಪಕೋಡ ತಿನ್ನುವಾಗ ಅದು ಸ್ವಲ್ಪ ಭಿನ್ನವಾದ ರುಚಿಯನ್ನು ಹೊಂದಿರುತ್ತದೆ. ಹೀಗಾಗಿ ಸಂಶಯಗೊಂಡ ನಿಖಿಲ್, ಬ್ರೆಡ್ ಪಕೋಡಗಳಲ್ಲಿ ಬಳಸುವ ಚೀಸ್ ಅನ್ನು ಹೊರತೆಗೆದು ಅಯೋಡಿನ್ ಟಿಂಚರ್ ದ್ರಾವಣಕ್ಕೆ ಹಚ್ಚಿದ್ದಾರೆ. ಚೀಸ್ ಅನ್ನು ಪರೀಕ್ಷಿಸ...