ಭಾರತ, ಏಪ್ರಿಲ್ 22 -- ಮಂಗಳೂರು: ಕರ್ನಾಟಕದಲ್ಲಿ ಜಾತಿಗಣತಿ, ಮೀಸಲಾತಿ ಸಹಿತ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿಗೆ ಮಂಗಳೂರಿನಲ್ಲಿ ಒಳಮೀಸಲಾತಿ ಕುರಿತು ಹಕ್ಕೊತ್ತಾಯದ ಸಮಾಲೋಚನಾ ಸಭೆಯೊಂದು ನಡೆದಿದೆ. ಭಾನುವಾರ ಮಂಗಳೂರು ನಗರದಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕುರಿತ ಸಮಾಲೋಚನಾ ಸಭೆಯೊಂದು ನಡೆಯಿತು.

ಬೀದಿ ಗುಡಿಸುವವರ ಮಕ್ಕಳು ಮತ್ತು ಜಿಲ್ಲಾಧಿಕಾರಿ ಮತ್ತು ಮಂತ್ರಿಗಳ ಮಕ್ಕಳು ಒಂದೇ ಕೋಟಾದಲ್ಲಿ ನೌಕರಿಗಾಗಿ ಸ್ಪರ್ಧೆ ನಡೆಸಬೇಕು ಎಂಬುದು ಅಮಾನವೀಯ ಎಂದು ಈ ಸಂದರ್ಭ ಮಾತನಾಡಿದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅಭಿಪ್ರಾಯಪಟ್ಟರು.

ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ - ಸೌಕರ್ಯಗಳೊಂದಿಗ...