Bengaluru, ಮಾರ್ಚ್ 11 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 10ರ ಸಂಚಿಕೆಯಲ್ಲಿ ಭಾಗ್ಯ ಮನೆಯಲ್ಲಿ ಎಲ್ಲರಿಗೂ ಕೈತುತ್ತು ಮಾಡಿ ತಿನ್ನಿಸಿದ್ದಾಳೆ. ಎಲ್ಲರೂ ಖುಷಿಯಲ್ಲಿ ಊಟ ಮಾಡುತ್ತಿದ್ದಾರೆ. ಭಾಗ್ಯ ಮಾತ್ರ ತೀರಾ ಭಾವುಕಳಾಗಿ ಮನೆಯವರಿಗೆ ಊಟ ಕೊಡುತ್ತಾ ಇದ್ದಾಳೆ. ಕುಸುಮಾ ಅದನ್ನು ಗಮನಿಸಿ, ಯಾಕೆ ಭಾಗ್ಯ ಬೇಸರಪಟ್ಟುಕೊಂಡಿದ್ದೀ, ನಾವೆಲ್ಲಾ ನಿನ್ನ ಕಷ್ಟದಲ್ಲಿ ಒಟ್ಟಾಗಿ ಇರುತ್ತೇವೆ, ನಾವೆಲ್ಲರೂ ಈ ಕಷ್ಟವನ್ನು ಒಟ್ಟಾಗಿ ಎದುರಿಸೋಣ ಎನ್ನುತ್ತಾಳೆ. ಕುಸುಮಾ ಮಾತಿಗೆ ಮನೆಯವರೂ ದನಿಗೂಡಿಸುತ್ತಾರೆ, ಭಾಗ್ಯ ಕಣ್ಣು ತುಂಬಿ ಬರುತ್ತದೆ. ಎಷ್ಟೇ ಕಷ್ಟವಾದರೂ ಸರಿ, ಮನೆಯವರನ್ನು ಬಿಟ್ಟು ಕೊಡುವುದಿಲ್ಲ, ಅವರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ.

ತನ್ವಿ ಹುಟ್ಟುಹಬ್ಬದ ರೀತಿಯಲ್ಲೇ ಮನೆ ಸಾಲದ ಕಂತು ವಿಚಾರದಲ್ಲೂ ಭಾಗ್ಯ ಸೋಲಬಹುದು ಎನ್ನುವುದು ತಾಂಡವ್ ಮತ್ತು ಶ್ರೇಷ್ಠಾ ಲೆಕ್ಕಾಚಾರ ಆಗಿತ್ತು. ಆದರೆ ಭಾಗ್ಯ ಮಾತ್ರ ದೇವರ ದಯೆಯಿಂದ ದೇವಸ್ಥಾನದ ಕಾರ್ಯಕ್...