ಭಾರತ, ಏಪ್ರಿಲ್ 15 -- ಮಂಗಳೂರು: ಮುಂಬೈನಿಂದ ಮದುವೆಗೆ ಬಂದಿದ್ದ 10 ಮಂದಿಯ ಕುಟುಂಬ ಮಂಗಳವಾರ ಮಂಗಳೂರು ಹೊರವಲಯದ ಸುರತ್ಕಲ್ ಬೀಚಿನಲ್ಲಿ ನೀರಾಟಕ್ಕಿಳಿದಿದ್ದು, ಇವರ ಪೈಕಿ ಇಬ್ಬರು ಹರೆಯದ ಹುಡುಗರು ಸಮುದ್ರಪಾಲಾಗಿದ್ದಾರೆ. ಸುರತ್ಕಲ್‌ನಲ್ಲಿ ಮದುವೆ ಇದ್ದ ಕಾರಣ ಮುಂಬೈನಿಂದ ಹತ್ತು ಮಂದಿಯ ಕುಟುಂಬ ಆಗಮಿಸಿತ್ತು. ಸಂಜೆ ವೇಳೆ ಎನ್‌ಐಟಿಕೆ ಬಳಿಯ ಬೀಚ್ ಗೆ ತೆರಳಿದೆ. ಈ ಸಂದರ್ಭ ದುರಂತ ಸಂಭವಿಸಿದೆ.

ಈ ಕುರಿತು ಸುರತ್ಕಲ್ ಪೊಲೀಸರು ನೀಡಿದ ಮಾಹಿತಿ ಹೀಗಿದೆ. ಏ.15ರಂದು ಸಂಜೆ 5.30ಕ್ಕೆ ಮುಂಬೈನ ವಿವೇಕ್ ಎಂಬವರ ಪುತ್ರ ದ್ವಿತೀಯ ಪಿಯುಸಿ ಮುಗಿಸಿದ್ದ ಧ್ಯಾನ್ (18) ಮತ್ತು ಮುಂಬೈನ ಉಮೇಶ್ ಕುಲಾಲ್ ಅವರ ಪುತ್ರ ಎಸ್.ಎಸ್.ಎಲ್.ಸಿ. ಮುಗಿಸಿದ ಬಾಲಕ ಹನೀಶ್ ಕುಲಾಲ್ (15) ಸಮುದ್ರ ಪಾಲಾಗಿ ಮೃತಪಟ್ಟವರು.

ಸುರತ್ಕಲ್ ಸಮೀಪದ ಸೂರಿಂಜೆ ಎಂಬಲ್ಲಿ ನಡೆದ ಮದುವೆಗೆ ಬಂದಿದ್ದು, ಮಂಗಳೂರು ಹೊರವಲಯದ ಸುರತ್ಕಲ್‌ ತೆರಳಿದವರು. ಹತ್ತು ಮಂದಿ ಕುಟುಂಬದ ಸದಸ್ಯರೊಂದಿಗೆ ಸುರತ್ಕಲ್ ಹೊರವಲಯದ ಎನ್ಎಟಿಕೆ ಬೀಚ್ ನೋಡಲು ಬಂದಿದ್ದರು. ಧ್ಯಾನ್ ಮತ್...