ಭಾರತ, ಮಾರ್ಚ್ 20 -- ಭಾರತ ಕ್ರಿಕೆಟ್‌ ತಂಡದ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. 2020ರಲ್ಲಿ ವಿವಾಹವಾದ ಈ ದಂಪತಿ, ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವರ್ಷದ ಫೆಬ್ರವರಿ 5ರಂದು, ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದರು. ಇಂದು (ಮಾರ್ಚ್ 20) ಮುಂಬೈನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರೂ ತಮ್ಮ ವಿಚ್ಛೇದನದ ಅಂತಿಮ ಪ್ರಕ್ರಿಯೆಗೆ ಹಾಜರಾಗಿದ್ದರು. ಕೋರ್ಟ್‌ ವಿಚ್ಛೇದನ ಅರ್ಜಿಯನ್ನು ಸ್ವೀಕರಿಸಿ, ಇಬ್ಬರೂ ಬೇರೆ ಬೇರೆ ಆಗಲು ಅನುಮತಿ ನೀಡಿದೆ.

ಸದ್ಯ ಇಬ್ಬರ ಡಿವೋರ್ಸ್‌ ಅಂತಿಮಗೊಂಡರೂ, ನ್ಯಾಯಾಲಯಕ್ಕೆ ಯೂಜಿ ಹಾಜರಾದ ರೀತಿಯು ನೆಟ್ಟಿಗರ ಗಮನ ಸೆಳೆದಿದೆ. ಕೋರ್ಟ್‌ಗೆ ಹಾಜರಾಗುವಾಗ ಧನಶ್ರೀ ಸರಳವಾಗಿ ಬಂದರೆ, ಚಹಲ್ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. ಧನಶ್ರೀ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್‌ನೊಂದಿಗೆ ಕ್ಯಾಶುಯಲ್ ಲುಕ್‌ನಲ್ಲಿ ಬಂದಿದ್ದಾರೆ. ಚಹಲ್ ಡೆನಿಮ...