ಭಾರತ, ಮಾರ್ಚ್ 12 -- Bihar Tanishq Loot: ಬಿಹಾರದ ಭೋಜಪುರ ಜಿಲ್ಲೆಯ ಆರಾ ಪಟ್ಟಣದ ತನಿಷ್ಕ್ ಜುವೆಲ್ಲರಿಯಿಂದ ಸೋಮವಾರ ಬೆಳಗ್ಗೆ ದರೋಡೆಕೋರರು 25 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಸಶಸ್ತ್ರ ಹೊಂದಿದ್ದ ದುಷ್ಕರ್ಮಿಗಳು ಬಂದು ಈ ಕೃತ್ಯವೆಸಗಿದ್ದರು. ಈ ಸಿನಿಮೀಯ ಮಾದರಿಯ ದರೋಡೆ ಕೃತ್ಯ ತನಿಷ್ಕ್ ಶೋರೂಂ ಒಳಗೆ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದರೋಡೆ ನಡೆಸಿದವರು ಮುಖ ಮರೆಮಾಚಿಕೊಂಡಿರಲಿಲ್ಲ. ಅವರ ಮಾತುಗಳು ಕೂಡ ಸ್ಪಷ್ಟವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಂದ ಹಾಗೆ ಈ ತನಿಷ್ಕ್ ಜುವೆಲ್ಲರಿ ಶೋರೂಂ ಗೋಪಾಲ್ ಚೌಕ್‌ನಲ್ಲಿದ್ದು, ಆರಾ ಪೊಲೀಸ್ ಠಾಣೆಗೆ ಸಮೀಪದಲ್ಲೇ ಇದೆ.
ಕಳೆದ ವರ್ಷವೂ ಬಿಹಾರದಲ್ಲಿ ತನಿಷ್ಕ್ ಶೋರೂಂ ದರೋಡೆ ನಡೆದಿತ್ತು. ಪೂರ್ಣಿಯಾ ಜಿಲ್ಲೆಯ ಶೋರೂಂನಲ್ಲಿ ಆ ದರೋಡೆ ಕೃತ್ಯ ನಡೆದಿತ್ತು.
ತನಿಷ್ಕ್ ಶೋರೂಂಗೆ ಶಸ್ತ್ರಧಾರಿ ದುಷ್ಕರ್ಮಿಗಳು ನುಗ್ಗಿದ ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಲಾಗಿತ್ತು. ಆದರೆ ಅಲ್ಲಿಂದ ಸ್ಪಂದನೆ ಸಿಕ್ಕಿಲ್ಲ. ದರೋಡೆಕೋರರು ಶೋರೂಂನಲ್ಲಿದ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.