ಭಾರತ, ಏಪ್ರಿಲ್ 21 -- ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ 2024-25ರ ಋತುವಿನ ಪುರುಷರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರ ಜೊತೆಗೆ ಗ್ರೇಡ್ 'ಎ+' ವಿಭಾಗದಲ್ಲಿ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ನಿರೀಕ್ಷೆಯಂತೆ ಶ್ರೇಯಸ್ ಅಯ್ಯರ್ ಮತ್ತು ಅಚ್ಚರಿಯಂತೆ ಇಶಾನ್ ಕಿಶನ್ ಕೇಂದ್ರ ಗುತ್ತಿಗೆ ಪಟ್ಟಿಗೆ ಮರಳಿದ್ದಾರೆ.

ಶ್ರೇಯಸ್ ಅಯ್ಯರ್ 'ಬಿ' ವಿಭಾಗದಲ್ಲಿದ್ದರೆ, ಇಶಾನ್ ಕಿಶನ್ 'ಸಿ' ವಿಭಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ ನಿಯಮಗಳನ್ನು ಗಾಳಿಗೆ ತೂರಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್​ ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಂಡಿದ್ದರು. ರಣಜಿ ಆಡುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯ ತೋರಿದ್ದ ಇಬ್ಬರ ವಿರುದ್ಧವೂ ಬಿಸಿಸಿಐ ಕ್ರಮ ಕೈಗೊಂಡಿತ್ತು. ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಇಬ್ಬರನ್ನೂ ಕೈಬಿಟ್ಟಿತ್ತು. ಬಳಿಕ ಅಯ್ಯರ್​ ರಣಜಿಗೆ ಮರಳಿ ಉತ್ತಮ ಪ್ರದರ್ಶನ ನೀಡಿದ್ದರು. ಆದ...