ಭಾರತ, ಮೇ 20 -- ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ ನಂತರ, ದೇಶಗಳ ನಡುವಿನ ರಾಜಕೀಯ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಇದು ಕ್ರಿಕೆಟ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುವ ಎಲ್ಲಾ ಪಂದ್ಯಾವಳಿಗಳಿಂದ ಹೊರಗುಳಿಯಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದನ್ನು ಅಲ್ಲಗಳೆದಿದ್ದಾರೆ. ಸದ್ಯ ನಮ್ಮ ಗಮನ ಐಪಿಎಲ್ ಮೇಲಿದ್ದು, ಉಳಿದ ವಿಷಯಗಳ ಬಗ್ಗೆ ಆಮೇಲೆ ನೋಡಬೇಕಿದೆ ಎಂದಷ್ಟೇ ಹೇಳಿದ್ದಾರೆ. ಉಭಯ ದೇಶಗಳ ನಡುವೆ ಈಗಾಗಲೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಎಸಿಸಿ ಅಥವಾ ಐಸಿಸಿ ಟೂರ್ನಿಗಳಲ್ಲೂ ಭಾರತ ಹೈಬ್ರಿಡ್ ಮಾದರಿಯಲ್ಲಿ ಮಾತ್ರವೇ ಪಾಕ್ ವಿರುದ್ಧ ಆಡುತ್ತಿದೆ. ಇದೀಗ ಇಂಡೋ-ಪಾಕ್ ಸಂಘರ್ಷದ ನಂತರ ಬಿಸಿಸಿಐ ತನ್ನ ನಿಲವಿನಲ್ಲಿ ಮತ್ತಷ್ಟು ನಿಷ್ಠುರವಾಗುವುದು ಬಹುತೇಕ ಖಚಿತ. ಈ ಕುರಿತು ಬರಹಗಾರ ಸನತ್ ರೈ, ತಮ್ಮ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ. ಮುಂದಿರುವು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.