ಭಾರತ, ಮಾರ್ಚ್ 27 -- ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರು 'ಎ' ತಂಡದ ಭಾಗವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ. ಎರಡು ನಾಲ್ಕು ದಿನಗಳ ಪಂದ್ಯಗಳಲ್ಲಿ ಲಯನ್ಸ್ ತಂಡವನ್ನು ಎದುರಿಸಲು ಈ ಆಟಗಾರರು ಆಯ್ಕೆಯಾಗುವ ನಿರೀಕ್ಷೆಯಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಯಾಗಿ ಈ ಪಂದ್ಯಗಳು ಮೇ-ಜೂನ್ ಅವಧಿಯಲ್ಲಿ ನಡೆಯಲಿವೆ. ಹೆಡ್ಡಿಂಗ್ಲಿಯಲ್ಲಿ ಜೂನ್ 20 ರಿಂದ ಹಿರಿಯ ತಂಡದ ಅಭಿಯಾನ ಆರಂಭವಾಗಲಿದೆ.

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದ ಆರಂಭವನ್ನು ಗುರುತಿಸುವ ಈ ಸರಣಿಗೆ ಮುನ್ನ, ಭಾರತ ಎ ಮೇ 30 ರಿಂದ ಎರಡು ಪ್ರವಾಸ ಪಂದ್ಯಗಳನ್ನು ಆಡಲಿದೆ. 'ಮೊದಲ 4 ದಿನಗಳ ಪಂದ್ಯವನ್ನು ಮೇ 30 ರಿಂದ ಕ್ಯಾಂಟರ್ಬರಿಯಲ್ಲಿರುವ ದಿ ಸ್ಪಿಟ್‌ಫೈರ್ ಗ್ರೌಂಡ್, ಸೇಂಟ್ ಲಾರೆನ್ಸ್‌ನಲ್ಲಿ ಆಯೋಜಿಸಲಾಗುವುದು. 2ನೇ ಪಂದ್ಯವು ಜೂನ್ 6 ರಂದು ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ಆರಂಭವಾಗಲಿದೆ' ಎ...