ಭಾರತ, ಫೆಬ್ರವರಿ 28 -- ಚಾಂಪಿಯನ್ಸ್ ಟ್ರೋಫಿಯ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ನ ವೇಳಾಪಟ್ಟಿ ಪ್ರಕಟಿಸಿದ್ದು, ಮಿಲಿಯನ್ ಡಾಲರ್​ ಟೂರ್ನಿ ಐಪಿಎಲ್​ ಜತೆಗೆ ಘರ್ಷಣೆಗೆ ಇಳಿದಿದೆ. ಪಿಎಸ್‌ಎಲ್​ 10ನೇ ಟೂರ್ನಿಯು ಏಪ್ರಿಲ್ 11ರಂದು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಎರಡು ಬಾರಿಯ ಚಾಂಪಿಯನ್ ಲಾಹೋರ್ ಖಲಂದರ್ ನಡುವೆ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮೇ 18 ರಂದು ಫೈನಲ್ ಪಂದ್ಯ ನಡೆಯಲಿದೆ. ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮೇ 25ರಂದು ನಡೆಯಲಿದೆ.

ಪಿಸಿಬಿ ಪ್ರಕಟಿಸಿದ ಈ ವೇಳಾಪಟ್ಟಿ ಗಮನಿಸಿದರೆ, ಬಿಸಿಸಿಐಗೆ ಸವಾಲು ಹಾಕಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಮೈದಾನಗಳು 34 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ನಡೆಯಲಿವೆ. ಮೇ 13 ರಂದು ಕ್ವಾಲಿಫೈಯರ್, ಮೇ 14 ರಂದು ಎಲಿಮಿನೇಟರ್ 1 ಮತ್ತು ಮೇ 16 ರಂದು ಎ...