ಭಾರತ, ಮಾರ್ಚ್ 27 -- ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬಿರುಗಾಳಿಯ ಶತಕ ಗಳಿಸಿದ ಇಶಾನ್ ಕಿಶನ್ ಮತ್ತೆ ಭಾರತ ತಂಡಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ. 2023ರಿಂದ ಭಾರತ ತಂಡದಿಂದ ದೂರ ಉಳಿದಿರುವ ಇಶಾನ್, ಬಿಸಿಸಿಐ ವಾರ್ಷಿಕ ಒಪ್ಪಂದಲ್ಲೂ ಅವಕಾಶ ಪಡೆಯುವ ನಿರೀಕ್ಷೆ ಇದೆ. ಆರ್​ಆರ್​ ಬೌಲರ್​​ಗಳ ವಿರುದ್ಧ ದಂಡಯಾತ್ರೆ ನಡೆಸಿದ ಇಶಾನ್, ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆಯೊಂದನ್ನು ಬರೆದರು. ಇದು ವೇಗದ ಶತಕವೂ ಹೌದು.

ಇದೆಲ್ಲದರ ಮಧ್ಯೆ, ಕಿಶನ್ ಅವರ ಅಜ್ಜ, 'ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅನ್ನು ಟೀಕಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬಿಹಾರದ ಔರಂಗಾಬಾದ್‌ನಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇಶಾನ್ ಅವರ ಅಜ್ಜ ರಾಮುಗ್ರ ಪಾಂಡೆ ತನ್ನ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದಾರೆ. 'ನನ್ನ ಮೊಮ್ಮಗನ ಶತಕವು ಬಿಸಿಸಿಐ ಮತ್ತು ರಾಹುಲ್ ದ್ರಾವಿಡ್‌ಗೆ ಬಲವಾಗ...