ಭಾರತ, ಮಾರ್ಚ್ 22 -- ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಭೂಮಿ ಕಾದ ಹೆಂಚಂತಾಗಿದೆ. ಅತಿಯಾದ ಬಿಸಿಲು, ಸೆಖೆಯಿಂದಾಗಿ ಮಹಾನಗರಿಯ ಜನರು ಕಂಗೆಟ್ಟಿದ್ದರು. ಇದೀಗ ನಗರದ ಕೆಲವೆಡೆ ಮಳೆ ಸುರಿದಿದ್ದು, ಬೆಂಗಳೂರಿನ ಜನತೆ ಖುಷಿಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ತಿಳಿಸಿತ್ತು.

ಈಗಾಗಲೇ ಹೆಬ್ಬಾಳ, ಯಲಹಂಕ ಭಾಗದಲ್ಲಿ ಜೋರು ಗಾಳಿ, ಮಳೆ ಸುರಿಯುತ್ತಿದೆ. ನಗರದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇದ್ದು ಜೋರು ಮಳೆಯಾಗುವ ನಿರೀಕ್ಷೆ ಇದೆ.

ಹೆಬ್ಬಾಳದಲ್ಲಿ ಜೋರಾದ ಗಾಳಿ, ಮಳೆಯ ಕಾರಣದಿಂದ ಪವರ್ ಕಟ್ ಉಂಟಾಗಿದೆ. ಆದರೆ ಬಿಸಿಲಿನ ಝಳದಿಂದ ಕಂಗೆಟ್ಟ ಜನರಿಗೆ ಮಳೆಯು ಖುಷಿ ಕೊಡುವುದಂತೂ ಖಚಿತ.

ಇದ್ದಕ್ಕಿದ್ದಂತೆ ಸುರಿದ ಮಳೆಯ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ. ಹೆಬ್ಬಾಳ ಭಾಗದಲ್ಲಿ ಮೊದಲೇ ಟ್ರಾಫಿಕ್ ಜಾಮ್ ಹೆಚ್ಚಿದ್ದು ಇದೀಗ ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಪ್ರಯಾಣಿಕರು ರಸ್ತೆಯಲ್ಲೇ ಪರದಾಡುವಂತಾಗಿದೆ.

ಯುಗಾದಿಯ...