Bangalore, ಫೆಬ್ರವರಿ 28 -- ಬೆಂಗಳೂರು: ಬೆಂಗಳೂರು ನಗರಕ್ಕೆ ಕಾವೇರಿ ನದಿ ಮೂಲವೂ ಸೇರಿದಂತೆ ನಾನಾ ಮೂಲಗಳಿಂದ ನೀರನ್ನು ತಂದು ನಿವಾಸಿಗಳಿಗೆ ಒದಗಿಸಿದರೂ ಬೇಸಿಗೆ ಬಂದರೆ ಬವಣೆ ಅಲ್ಲಲ್ಲಿ ಶುರುವಾಗುತ್ತದೆ. ಕಳೆದ ವರ್ಷವಂತೂ ನೀರಿನ ಬವಣೆಯಿಂದ ಜನ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ ಬಾರಿಯೂ ಇನ್ನೂ ಮಾರ್ಚ್‌ ಬಂದಿಲ್ಲ. ಬೇಸಿಗೆ ಮೂರು ತಿಂಗಳು ಇರುವಾಗಲೇ ಕೆಲವು ಭಾಗದಲ್ಲಿ ನೀರಿನ ಬವಣೆ ಕಾಣುತ್ತಿದೆ. ಬೆಂಗಳೂರು ಜಲಮಂಡಳಿಯೂ ಕೂಡ ನೀರಿನ ವಿತರಣೆ ಜತೆಗೆ ಜನರಲ್ಲಿ ಅನಗತ್ಯ ನೀರಿನ ವ್ಯಯದ ಕುರಿತು ಜಾಗೃತಿ ಮೂಡಿಸುತ್ತಿದೆ. ಕೆಲವರಿಗೆ ದಂಡ ಪ್ರಯೋಗವನ್ನು ಮಾಡುತ್ತಿದೆ. ಇದರ ನಡುವೆಯೇ ಜನತೆ ಈ ಬೇಸಿಗೆವರೆಗೆ ಏನೇನೋ ಆಗಲಿದೆಯೋ, ನೀರು ಸಿಕ್ಕರೆ ಬೇಸಿಗೆ ಮುಗಿಸುತ್ತೇವೆ ಎನ್ನುವ ಮನಸ್ಥಿತಿಯಲ್ಲಿಯೇ ಇದ್ದಾರೆ.

ಸುಡುವ ಬೇಸಿಗೆಗೆ ಸಜ್ಜಾಗುತ್ತಿದ್ದಂತೆ, ನಗರದಾದ್ಯಂತದ ಅಪಾರ್ಟ್ಮೆಂಟ್ ಸಂಕೀರ್ಣಗಳು ಈಗಾಗಲೇ ಪರಿಚಿತ ಸವಾಲಾದ ನೀರಿನ ಕೊರತೆಯನ್ನು ಎದುರಿಸಲು ತಯಾರಿ ನಡೆಸುತ್ತಿವೆ. ಕಳೆದ ವರ್ಷದ ತೀವ್ರ ಬಿಕ್ಕಟ್ಟು ಎಚ್ಚರಿಕೆಯ ...