ಭಾರತ, ಮಾರ್ಚ್ 28 -- ಬೇಸಿಗೆ ಶುರುವಾಗಿದ್ದು, ಬಿಸಿಲಿನ ತಾಪ ಹೆಚ್ಚಿದೆ. ಹೆಂಗಳೆಯರು ತಾವು ಮನೆಯಿಂದ ಆಚೆ ಹೋಗುವಾಗ ಕೊಡೆ ಹಿಡಿದೇ ಹೋಗುತ್ತಾರೆ. ಮುಖ, ಕೈಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಬಹುತೇಕ ಎಲ್ಲಾ ಹೆಣ್ಣುಮಕ್ಕಳಿಗೂ ತಮ್ಮ ತ್ವಚೆಯ ಕಾಳಜಿ ಕೊಂಚ ಹೆಚ್ಚೇ ಇರುತ್ತದೆ. ಹೀಗಾಗಿ ತಮ್ಮ ಮುಖವನ್ನು ಕಾಂತಿಯುತವಾಗಿಸಲು ಕೆಲವರು ಬ್ಯೂಟಿಪಾರ್ಲರ್ ಮೊರೆ ಹೋದರೆ, ಇನ್ನೂ ಕೆಲವರು ಮನೆಯಲ್ಲೇ ಇರುವಂಥ ವಸ್ತುಗಳಿಂದ ಚರ್ಮದ ಆರೈಕೆ ಮಾಡಿಕೊಳ್ಳುತ್ತಾರೆ.

ಮನೆಯಲ್ಲೇ ನಾವು ಅಡುಗೆಗೆ ಬಳಸುವ ಪದಾರ್ಥಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇವುಗಳು ಬಹಳ ಸರಳ ಹಾಗೂ ಸುರಕ್ಷಿತ ವಿಧಾನ. ಯೋಗ ತಜ್ಞೆ ಮತ್ತು ಲೇಖಕಿ ವಸುಧಾ ರೈ ಮುಖದ ಕಾಂತಿಗಾಗಿ ಮಸೂರ್ ದಾಲ್ ಫೇಸ್‌ಮಾಸ್ಕ್ ಪ್ರಯೋಜನದ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ತಜ್ಞರು ಕೂಡ ಚನ್ನಂಗಿ ಬೇಳೆಯ ಪ್ರಯೋಜನದ ಬಗ್ಗೆ ವಿವರಿಸಿದ್ದಾರೆ. ಆರೋಗ್ಯಕ್ಕೆ ಮಾತ್ರವಲ್ಲ ಮುಖದಲ್ಲಿ ಹೊಳಪು ಹೆಚ್ಚಲು ಕೂಡ ಈ ಮಸೂರ್‌ ದಾಲ್‌ ಉತ್ತಮ.

ವಸ...