Bengaluru, ಏಪ್ರಿಲ್ 19 -- ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 5-11-1975. ಇವರ ಜನನ ಮಧ್ಯಾಹ್ನ 3.54ಕ್ಕೆ ಶಿಕಾರಿಪುರದಲ್ಲಿ ಆಗಿದೆ.

ಇವರ ಜಾತಕದಲ್ಲಿ ಗುರು ಗ್ರಹವು ಸ್ವಕ್ಷೇತ್ರದಲ್ಲಿ ಇದ್ದರೂ ವಕ್ರಿಯಾಗಿದೆ. ಆದರೆ ಬುಧ ಮತ್ತು ಶುಕ್ರ ಗ್ರಹಗಳ ನಡುವೆ ಪರಿವರ್ತನಾ ಯೋಗವಿದೆ. ರಾಜಕೀಯ ಜೀವನಕ್ಕೆ ಮುಖ್ಯವಾದ ರವಿಯು ಬುಧ ಮತ್ತು ರಾಹುಗಳ ನಡುವೆ ಅಷ್ಟಮದಲ್ಲಿ ನೆಲೆಸಿದೆ. ಇದರಿಂದ ಇವರ ರಾಜಕೀಯ ಜೀವನದಲ್ಲಿ ಸದಾ ಹೋರಾಟ ಇರುತ್ತದೆ. ಕೇವಲ ಸ್ವಂತ ಪಕ್ಷದವರು ಮಾತ್ರವಲ್ಲದೆ ಬೇರೆಯವರಿಂದಲೂ ತೊಂದರೆ ಇರುತ್ತದೆ. ಸದಾ ಬದಲಾವಣೆಗಳಿಗೆ ಹೊಂದುಕೊಂಡು ಬಾಳಬೇಕಾಗುತ್ತದೆ. ಆದರೆ ಇವರು ತಮ್ಮ ಮನಸ್ಸಿನ ಮೇಲೆ ಹತೋಟಿ ಸಾಧಿಸುತ್ತಾರೆ. ಗುರು ಮತ್ತು ಶುಕ್ರರ ನಡುವೆ ಪರಸ್ಪ...