ಭಾರತ, ಏಪ್ರಿಲ್ 27 -- ಫ್ಯಾಷನ್ ಜಗತ್ತು ಅನ್ನೋದು ನಿರಂತರವಾಗಿ ಹರಿಯುವ ನದಿಯಂತೆ. ಇಲ್ಲಿ ದಿನಕ್ಕೊಂದ ಹೊಸ ಹೊಸ ಟ್ರೆಂಡ್ ಬರುತ್ತಲೇ ಇರುತ್ತದೆ. ನಿನ್ನೆ ಇರುವ ಟ್ರೆಂಡ್ ಇವತ್ತು ಬದಲಾಗಿ ಇರುತ್ತದೆ. ಆದರೆ ಭಾರತೀಯರಿಗೆ ಸೀರೆ ಮೇಲೆ ಇರುವ ಒಲವು ಮಾತ್ರ ಕೊಂಚವೂ ಬದಲಾಗೋದಿಲ್ಲ. ಸೀರೆ ಉಡುವ ಟ್ರೆಂಡ್ ಬದಲಾಗುತ್ತೆ, ಆದರೆ ಸೀರೆ ಬದಲಾಗೊಲ್ಲ. ಜೊತೆಗೆ ಒಬ್ಬೊಬ್ಬರು ಒಂದೊಂದು ರೀತಿ ಸೀರೆ ಉಟ್ಟು ಸೀರೆಯ ಮೆರುಗನ್ನು ಹೆಚ್ಚಿಸುತ್ತಾರೆ.

ನಿಮ್ಮ ಬಳಿ ಕೆಂಪು-ಬಿಳಿ ಬಣ್ಣದ ಪಟ್ಟೆ ಸೀರೆ ಇದ್ದರೆ ಅಥವಾ ಈ ರೀತಿಯ ಸೀರೆ ಖರೀದಿ ಮಾಡಬೇಕು ಅಂತಿದ್ದರೆ ಇದನ್ನು ಯಾವ ರೀತಿ ಸ್ಟೈಲಿಶ್ ಆಗಿ ಉಡಬಹುದು ಅಂತ ನೀವು ಯೋಚನೆ ಮಾಡಬಹುದು. ಆದರೆ ಈ ಸೀರೆಯನ್ನು ಹೀಗೆಲ್ಲಾ ಉಟ್ಟು ನಿಮ್ಮ ಅಂದವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು ಎಂದು ತೋರಿಸಿದ್ದಾರೆ ಸೆಲೆಬ್ರಿಟಿಗಳಾದ ಜಾಹ್ನವಿ ಕಪೂರ್‌, ಮೀರಾ ರಜಪೂತ್ ಹಾಗೂ ತ್ರಿಷಾ ಕೃಷ್ಣನ್‌. ಕೆಂಪು-ಬಿಳಿ ಪಟ್ಟೆ ಸೀರೆಯನ್ನು ಅವರು ಯಾವ ರೀತಿ ಧರಿಸಿದ್ದಾರೆ ನೋಡಿ.

ಕೆಂಪು-ಬಿಳಿ ಪಟ್ಟೆ ಸೀರೆ ಜೊತೆ ಲ್ಯಾ...