ಭಾರತ, ಏಪ್ರಿಲ್ 9 -- Billa Ranga Baashaa Movie: ಕಿಚ್ಚ ಸುದೀಪ್‌ ನಟನೆಯ ಮುಂಬರುವ ಸಿನಿಮಾ "ಬಿಲ್ಲ ರಂಗ ಭಾಷಾ"ದ ಕುರಿತು ಅಪ್‌ಡೇಟ್‌ ಬಯಸಿದ್ದ ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಕುತೂಹಲ ಹೆಚ್ಚಿಸಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾಕ್ಕೆ ಸಂಬಂಧಪಟ್ಟಂತೆ ಹೊಸ ಮಾಹಿತಿಯೊಂದನ್ನು ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದ ನಾಯಕ ಸುದೀಪ್‌ ಅನ್ನೋ ಸಂಗತಿ ಎಲ್ಲರಿಗೂ ಗೊತ್ತು. ಆದರೆ, ಸುದೀಪ್‌ಗೆ ನಾಯಕಿಯಾಗಿ ನಟಿಸುವವರು ಯಾರು? ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ. ಇನ್ನು ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ನಟಿಸಲಿದ್ದಾರೆ... ಹೀಗೆ ಅಭಿಮಾನಿಗಳಲ್ಲಿರುವ ಹಲವು ಕುತೂಹಲವನ್ನು ಸುದೀಪ್‌ ಇನ್ನಷ್ಟು ಹೆಚ್ಚಿಸಿದ್ದಾರೆ.

ಏಪ್ರಿಲ್‌ 16ರಂದು ಏನು ನಡೆಯಲಿದೆ ಗೊತ್ತೆ? ಬಿಲ್ಲಾ ರಂಗ ಭಾಷಾ ಸಿನಿಮಾದ ಶೂಟಿಂಗ್‌ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಿನಿಮಾದ ಸೆಟ್‌, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿ...