ಭಾರತ, ಏಪ್ರಿಲ್ 25 -- ರಂಗಸ್ವಾಮಿ ಮೂಕನಹಳ್ಳಿ ಬರಹ: ನಿಮಗೆಲ್ಲಾ ಗೊತ್ತಿದೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ ನನಗೆ ನೆನಪಿದೆ. ನಮ್ಮೂರಿಗೆ ಒಂದು ಐದತ್ತು ಜನರ ಗುಂಪು ಬರುತ್ತಿತ್ತು. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಬರುತ್ತಿದ್ದರು. ಇಲ್ಲವೇ ಊರಿನಲ್ಲಿ ಇಲಿಗಳ ಕಾಟ , ಬೆಕ್ಕಿನ ಕಾಟ ಹೆಚ್ಚಾಗಿದೆ ಎಂದು ಹೇಳಿದರೆ ಅವರು ಬರುತ್ತಿದ್ದರು ಎನ್ನುವ ನೆನಪು . ಅವರನ್ನು ಶಿಳ್ಳೆ ಕ್ಯಾತರು ಎನ್ನುತ್ತಿದ್ದ ನೆನಪು. ಅವತ್ತಿಗ್ಗೆ ಇಂದಿನ ರೀತಿ ಪೆಸ್ಟ್ ಕಂಟ್ರೋಲ್ ಇರಲಿಲ್ಲ. ಶಿಳ್ಳೆ ಕ್ಯಾತ ಜನರೇ ಪೆಸ್ಟ್ ಕಂಟ್ರೋಲ್ ಪ್ರವೀಣರು. ಅವರು ಬಂದವರೇ , ಮನೆಯ ಅಕ್ಕ ಪಕ್ಕ ಇರುತ್ತಿದ್ದ ಖಾಲಿ ಜಾಗದಲ್ಲಿ ಇಲಿಗಳ ಬಿಲ ಎಲ್ಲಿದೆ ಎನ್ನುವುದನ್ನು ಗುರುತಿಸುತ್ತಿದ್ದರು. ಮತ್ತು ಅದನ್ನು ಒಣಗಿದ ಹುಲ್ಲಿನಿಂದ ಮುಚ್ಚುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಆ ಬಿಲದಿಂದ ನೇರಕ್ಕೆ , ಸ್ವಲ್ಪ ಅಕ್ಕಪಕ್ಕ ಎಲ್ಲೆಡೆ ಹುಡುಕಾಡಿ ಇನ್ನೊಂದೆರೆಡು ಇಲಿ ಹೊರಬಹುದಾದ ಎಕ್ಸಿಟ್‌ಗಳನ್ನೂ ಕೂಡ ಮುಚ್ಚಿ ಬಿಡುತ್ತಿದ್ದರು.

ಮತ್ತೆ ಮೊದಲ ಬಿಲಕ್ಕೆ ಬಂದು ಒ...