Mangalore, ಏಪ್ರಿಲ್ 19 -- ಮಂಗಳೂರು: ಸಾಮಾನ್ಯವಾಗಿ ಬೇಸಗೆ ಎಂದರೆ ನೀರಿಗೆ ತತ್ವಾರ. ಕಳೆದ ವರ್ಷದವರೆಗೂ ಮಂಗಳೂರಿನವರು ಬೇಸಗೆ ಬಂದರೆ ಏನ್ಮಾಡೋದು ಎಂಬ ಚಿಂತೆಯಲ್ಲಿದ್ದರು. ಈ ಬಾರಿ ಅಕಾಲಿಕ ಮಳೆ ವರದಾನ ಕೊಟ್ಟಂತಾಗಿದೆ. ಕುಡಿಯುವ ನೀರಿನ ಚಿಂತೆ ದೂರವಾಗಿದೆ. ಮಂಗಳೂರಿಗರಿಗೆ ಕುಡಿಯುವ ನೀರೊದಗಿಸಲೆಂದೇ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಬಂಟ್ವಾಳ ತಾಲೂಕಿನ ತುಂಬೆಯ ಅಣೆಕಟ್ಟು ಜಲಸಮೃದ್ಧಿಯಿಂದ ತುಂಬಿದೆ. ನೀರಿನ ಮಟ್ಟ ಏರಿಕೆಯಾಗಿದ್ದು, 6 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ. ಇನ್ನೂ ಒಂದೂವರೆ ತಿಂಗಳವರೆಗೂ ನೀರನ್ನು ಸರಬರಾಜು ಮಾಡಿ ಜನರ ನೀರಿನ ಬವಣೆ ತೀರಿಸಲು ಅಧಿಕಾರಿಗಳು, ಸಿಬ್ಬಂದಿ ಅಣಿಯಾಗಿದ್ದಾರೆ.

ಹಿಂದಿನ ಒಂದು ದಶಕದ ಅವಧಿಯಲ್ಲಿ ಹಲವು ಬಾರಿ ತುಂಬೆ ಜಲಾಶಯದ ನೀರಿನ ಮಟ್ಟ ಬೇಸಿಗೆಯಲ್ಲಿ ಕುಸಿದು ನೀರು ಸರಬರಾಜಿಗೆ ವ್ಯತ್ಯಯವಾದ ಉದಾಹರಣೆಗಳಿವೆ. ಇದರಿಂದ ಮಂಗಳೂರು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಿಂದ ನೀರನ್ನು ದಿನ ಬಿಟ್ಟು ದಿನ ಇಲ್ಲವೇ ರೇಷನಿಂಗ್‌ ರೂಪದಲ್ಲಿ ಒದಗಿಸಿದ್ದೂ ಇದೆ....