ಭಾರತ, ಏಪ್ರಿಲ್ 15 -- ಬೇಸಿಗೆ ಬಂದಾಕ್ಷಣ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಎದುರಾಗುವುದು ಸಹಜ. ಅದರಲ್ಲೂ ಈ ವರ್ಷ ಬಿಸಿಲಿನ ತಾಪ ಬಲು ಜೋರಾಗಿಯೇ ಇದೆ. ಅತಿಯಾದ ಬಿಸಿಲು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನು ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣು ಬಿಸಿಲಿನ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಣ್ಣುಗಳು ಒಣಗಿದಂತಾಗಿ ಕಿರಿಕಿರಿ, ಮಂಜಾಗುವುದು ಇಂತಹ ತೊಂದರೆಗಳು ಎದುರಾಗುತ್ತಿವೆ. ಇದರಿಂದ ದೈನಂದಿನ ಕೆಲಸಗಳಿಗೂ ತೊಂದರೆ ಉಂಟಾಗುತ್ತಿದೆ. ಈ ತೊಂದರೆಗೆ ಪ್ರಮುಖ ಕಾರಣ ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಸದೇ ಇರುವುದು ಅಥವಾ ಕಣ್ಣೀರು ಬೇಗನೆ ಆವಿಯಾಗುವುದು. ಕಣ್ಣುಗಳು ಸರಿಯಾಗಿ ನಯವಾಗದೇ ಇದ್ದಾಗ ಡ್ರೈ ಐ ಸಿಂಡ್ರೋಮ್‌ ಕಾಣಿಸುತ್ತದೆ.

ಮೊದಲೇ ಹೇಳಿದಂತೆ ಇದರಿಂದ ಕಣ್ಣಿನಲ್ಲಿ ಕಿರಿಕಿರಿ, ಕಣ್ಣು ಕೆಂಪಾಗುವುದು, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದೇ ಇರುವುದು ಇಂತಹ ಹಲವು ಸಮಸ್ಯೆಗಳು ಎದುರಾಗಬಹುದು. ಪರಿಸರದ ಕಾರಣದಿಂದ, ದೀರ್ಘವಧಿಯವರೆಗೆ ಸ್ಕ್ರೀನ್‌ ನೋಡುವುದು ಇನ್ನಿತರ ಸಮ...