ಬೆಂಗಳೂರು, ಮೇ 6 -- ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ವಿಶ್ವಕ್ಕೆ ಐಟಿ ಸಿಟಿಯಾಗಿ ಬೆಳೆದಿರುವ ಉದ್ಯಾನ ನಗರಿ ಹಲವು ಬಾರಿ ಮೂಲಸೌಕರ್ಯಗಳ ಕೊರತೆಯ ವಿಷಯವಾಗಿ ಟೀಕೆಗಳಿಗೆ ಒಳಗಾಗುತ್ತದೆ. ಇದೀಗ ಅದೇ ಮೂಲಸೌಕರ್ಯ ವಿಷಯವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಬೆಂಗಳೂರನ್ನು ಹೊಗಳಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಟಿಮ್ ಡೇವಿಡ್ ಈ ಬಗ್ಗೆ ಮಾತನಾಡಿದ್ದಾರೆ. ನಗರದ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳಿದ್ದಾಗ ಆಟಗಾರರು ತಮ್ಮ ಹೋಟೆಲ್ ಜಿಮ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲ. ಬದಲಿಗೆ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿರುವ ಜಿಮ್ ಸೌಕರ್ಯಗಳನ್ನು ಸದ್ಬಳಕೆ ಮಾಡುತ್ತಾರೆ ಎಂಬುವುದು ಇವರ ಮಾತಿನಿಂದ ಸ್ಪಷ್ಟವಾಗುತ್ತದೆ.
ಆರ್‌ಸಿಬಿ ಆಟಗಾರ ಟಿಮ್ ಡೇವಿಡ್, ಬಿಬಿಎಂಪಿ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿರುವ ಓಪನ್ ಏರ್ ಜಿಮ್‌ಗಳನ್ನು ಶ್ಲಾಘಿಸಿದ್ದಾರೆ. ಅವುಗಳನ್ನು ಸಿಂಗಾಪುರಕ್ಕೆ ಹೋಲಿಸಿದ್ದು, ಅಲ್ಲಿಯೂ ಇದೇ ರೀತಿಯ ಸೌಲಭ್ಯಗಳಿವೆ ಎಂದಿದ್ದ...
Click here to read full article from source
To read the full article or to get the complete feed from this publication, please
Contact Us.