ಭಾರತ, ಏಪ್ರಿಲ್ 7 -- ಜೀ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸವೂ ಒಂದು. ಟಿಆರ್‌ಪಿಯಲ್ಲೂ ಟಾಪ್‌ನಲ್ಲಿರುವ ಈ ಧಾರಾವಾಹಿಯಲ್ಲಿ ಆಗಾಗ ಹೊಸ ಹೊಸ ಟ್ವಿಸ್ಟ್ ಮೂಲಕ ಜನರನ್ನು ರಂಜಿಸುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀಲಂಕಾಕ್ಕೆ ಹನಿಮೂನ್‌ಗೆಂದು ತೆರಳಿತ್ತು ಸಿದ್ದೇಗೌಡ-ಭಾವನಾ ಹಾಗೂ ಜಯಂತ್‌-ಜಾಹ್ನವಿ ಜೋಡಿ. ಆದರೆ ಶ್ರೀಲಂಕಾದಲ್ಲಿ ಜಾನುಗೆ ಗಂಡನ ಅಸಲಿ ಮುಖದ ಪರಿಚಯವಾಗುತ್ತದೆ. ಇನ್ನು ಮುಂದೆ ಅವನ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದು ನಿರ್ಧಾರ ಮಾಡಿದ ಆಕೆ ಸಮುದ್ರಕ್ಕೆ ಹಾರುತ್ತಾಳೆ.

ಹೆಂಡತಿಯನ್ನು ಸಾಕಷ್ಟು ಹುಡುಕಾಡಿದ ಜಯಂತ್ ಅವಳು ಸಿಗದೇ ಇದ್ದಾಗ ಮನೆಗೆ ಬಂದು ಅವಳು ಸತ್ತಿರುವ ವಿಚಾರ ಹೇಳುತ್ತಾನೆ. ಎಲ್ಲರೂ ಜಾಹ್ನವಿ ಸತ್ತಿದ್ದಾಳೆಂದು ದುಃಖಿಸುತ್ತಾರೆ. ಜಾನು ಅಭಿಮಾನಿಗಳು ಕೂಡ ಜಾಹ್ನವಿ ಪಾತ್ರ ಮುಗಿಸಬಹುದು ಎಂದು ಅಂದುಕೊಳ್ಳುತ್ತಿರುವಾಗಲೇ ಜಾಹ್ನವಿ ತಮಿಳುನಾಡಿನ ಸಮುದ್ರ ತೀರದಲ್ಲಿ ಪ್ರತ್ಯಕ್ಷಳಾಗುತ್ತಾಳೆ.

ಜಾನು ಮತ್ತೆ ಬಂದಳು ಎನ್ನುವ ಖುಷಿಯ ನಡುವೆ, ಆಕೆಯ...