Bengaluru, ಫೆಬ್ರವರಿ 25 -- ಬಿದಿರು ಕೃಷಿ ಮಾಹಿತಿ: ಬಿದಿರು ಕೃಷಿ ಹೇಗೆ ಮಾಡುವುದು, ಇದರಿಂದ ಆದಾಯ ದೊರಕುವುದೇ, ಬಿದಿರು ಕೃಷಿ ಕುರಿತು ಮಾಹಿತಿ ನೀಡುವ ಸಂಸ್ಥೆಗಳು ಇವೆಯೇ? ಹೀಗೆ, ಬಿದಿರು ಕೃಷಿ ಕುರಿತು ಸಾಕಷ್ಟು ಕೃಷಿಕರಿಗೆ ಮಾಹಿತಿ ಇರುವುದಿಲ್ಲ. ಕೃಷಿ ಮಾಡದೆ ಉಳಿದಿರುವ ಕೃಷಿ ಭೂಮಿಯಲ್ಲಿ ಬಿದಿರಿನ ವಾಣಿಜ್ಯ ಕೃಷಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಉತ್ತೇಜಿಸುತ್ತಿದೆ. ಕೃಷಿಕರೇ ಕಟ್ಟಿದ ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ರಾಮಪ್ರತೀಕ್‌ ಕರಿಯಾಲ ಅವರು "ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ" ಸಂದರ್ಶನದಲ್ಲಿ ಬಿದಿರು ಬೇಸಾಯದ ಕುರಿತು ಸಾಕಷ್ಟು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಬಿದಿರು ಒಮ್ಮೆ ನಟ್ಟು ಮರೆತು ಬಿಡಬಹುದಾದ ಒಂದು ಬೆಳೆ - ಇದಕ್ಕೆ ಯಾವುದೇ ಗೊಬ್ಬರ, ನೀರಾವರಿ ಅಗತ್ಯವಿಲ್ಲ, ಕಾರ್ಮಿಕರ ಅವಲಂಬನೆ ಇಲ್ಲ. ಹೀಗಾಗಿ, ಕೃಷಿಕರ ಅನೇಕ ಸಮಸ್ಯೆಗಳಿಗೆ ಬಿದಿರು ಬೆಳೆ ಪರಿಹಾರ ಒದಗಿಸಬಲ್ಲದು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಇತ್ತೀಚಿನ ಒಂದೆರಡು ವ...