Bengaluru, ಏಪ್ರಿಲ್ 18 -- ದೂದ್‌ಪೇಡ ದಿಗಂತ್‌ ಮಂಚಾಲೆ ನಟನೆಯ ʻಎಡಗೈಯೇ ಅಪಘಾತಕ್ಕೆ ಕಾರಣʼ ಸಿನಿಮಾ ಸಿದ್ಧವಾಗಿಯೇ ಕೆಲ ತಿಂಗಳುಗಳು ಕಳೆದಿವೆ. ಆದರೂ ಅದ್ಯಾಕೋ ಈ ಸಿನಿಮಾ ಬಿಡುಗಡೆಗೆ ಕಾಲ ಕೂಡಿ ಬಂದಿಲ್ಲ. ಬಿಡುಗಡೆ ಮುಂದೂಡುತ್ತಲೇ ಬಂದಿತ್ತು ಈ ಸಿನಿಮಾತಂಡ. ಇದೀಗ ಈ ಚಿತ್ರ ಬಿಡುಗಡೆ ಆಗುವ ಕಾಲ ಸನ್ನಿಹಿತವಾಗಿದೆ. ಅಂದರೆ, ಇಬ್ಬರು ನಿರ್ಮಾಪಕರು ಆಪತ್ಬಾಂಧವರಾಗಿ ಬಂದಿದ್ದಾರೆ. 2024ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಬ್ಲಿಂಕ್ ಮತ್ತು ಶಾಖಾಹಾರಿ ಸಿನಿಮಾದ ನಿರ್ಮಾಪಕರು ಒಟ್ಟಿಗೆ ಸೇರಿ ʻಎಡಗೈಯೇ ಅಪಘಾತಕ್ಕೆ ಕಾರಣʼ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಸಮರ್ಥ್ ಕಡ್ಕೊಳ್ ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುತ್ತಿತ್ತು. ಈಗ ಬ್ಲಿಂಕ್ ಸಿನಿಮಾದ ನಿರ್ಮಾಪಕ ರವಿಚಂದ್ರನ್ ಎಜೆ ಹಾಗೂ ಶಾಖಾಹಾರಿ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ಈ ಸಿನಿಮಾವನ್ನ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ಬ್ಲಿಂಕ್...