ಭಾರತ, ಜನವರಿ 30 -- ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಅಭಿನಯದ ದೇವಾ ಸಿನಿಮಾ ನಾಳೆ (ಜನವರಿ 31) ಬಿಡುಗಡೆಯಾಗುತ್ತಿದೆ. ಮುಂಗಡ ಬುಕಿಂಗ್ ಕೂಡ ಜೋರಾಗಿ ನಡೆದಿದೆ. ಇದೊಂದು ಪವರ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುವಂತೆ ತುದಿಗಾಲಲ್ಲಿ ಕೂರುವಂತೆ ಮಾಡಿದೆ. ರೋಶನ್ ಆಂಡ್ರ್ಯೂಸ್ ನಿರ್ದೇಶನ ಮಾಡಿರುವ ದೇವಾ ಮಲಯಾಳಂ ಭಾಷೆಯ 'ಮುಂಬೈ ಪೊಲೀಸ್' ಸಿನಿಮಾದ ರಿಮೇಕ್ ಆಗಿದೆ. ಎಲ್ಲ ಅಂದುಕೊಂಡಂತೇ ಆದರೆ 2024ರಲ್ಲೇ ಬಿಡುಗಡೆಯಾಗಬೇಕಿದ್ದ ದೇವಾ ಸಿನಿಮಾ ಕೆಲ ಕಾರಣಗಳಿಂದಾಗಿ 2025ರ ಆರಂಭದಲ್ಲಿ ಬಿಡುಗಡೆಯಾಗುತ್ತಿದೆ.

ದೇವಾ ಸಿನಿಮಾದ ಟ್ರೇಲರ್ ಮೂಲಕವೇ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನಿರೀಕ್ಷಿಸಬಹುದಾದ ಖಡಕ್ ಅಂಶಗಳ ಸುಳಿವು ವ್ಯಕ್ತವಾಗಿತ್ತು. ಭಯೋತ್ಪಾದಕರಿಂದ ಹತರಾದ ಅಧಿಕಾರಿಯ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಹೊಂದಿರುವ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಶಾಹಿದ್ ಕಪೂರ್ ಸಿನಿಮಾ ಟ್ರೇಲರ್ ನೋಡಿದವರಲ್ಲಿ ನಿರೀಕ್ಷೆ ಸೃಷ್ಟಿಸಿದ್...