Bangalore, ಮೇ 15 -- ಬೆಂಗಳೂರು: ಹೈಟೆಕ್‌ ಸೈಬರ್‌ ಕ್ರೈಮ್‌ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಅಪರಾಧಿಗಳೂ ಸೇರಿದಂತೆ 12 ಅಂತಾರಾಜ್ಯ ಆರೋಪಿಗಳನ್ನು ಬೆಂಗಳೂರಿನಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಲಿಯಾ ಮೂಲದ ಹರ್ಷವರ್ಧನ್‌ ಓಝಾ (25) ಮತ್ತು ಮಹಾರಾಷ್ಟ್ರದ ನವಿ ಮುಂಬೈನ ಮೂಲದ ಸೋನು (27) ಪ್ರಮುಖ ಕಿಂಗ್‌ ಪಿನ್‌ ಗಳು. ಬಿಟೆಕ್‌ ಪದವೀಧರನಾದ ಓಝಾ ನಿರುದ್ಯೋಗಿ. ಹೈಸ್ಕೂಲ್‌ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಸೋನು ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆ ಕೆಲಸ ಮಾಡುತ್ತಿದ್ದ.ಆಕಾಶ್‌ ಕುಮಾರ್‌ ಯಾದವ್‌, ಗೋರಖ್‌ ನಾಥ್‌ ಯಾದವ್‌, ಸಂಜಿತ್‌ ಕುಮಾರ್‌ ಆಕಾಶ್‌ ಕುಮಾರ್‌, ಅಮಿತ್‌ ಯಾದವ್‌, ಗೌರವ್‌ ಪ್ರತಾಪ್‌ ಸಿಂಗ್‌, ಬ್ರಿಜೆಶ್‌ ಸಿಂಗ್‌,ರಾಕ್‌ ಮಿಶ್ರಾ, ತುಷಾರ್‌ ಮಿಶ್ರಾ ಮತ್ತು ಗೌತಮ್‌ ಶೈಲೇಶ್‌ ಬಂಧಿತ ಇತರ ಆರೋಪಿಗಳು. ಸಂಜಿತ್‌ ಬಿಹಾರ ಮೂಲದವನಾದರೆ ಉಳಿದವರೆಲ್ಲರೂ ಉತ್ತರಪ್ರದೇಶದ ಅಪರಾಧಿಗಳು.

ಆರೋಪಿಗಳಿಂದ 400 ಮೊಬೈಲ್‌ ಸಿಮ್‌ ಗಳು, 140 ಎಟಿಎಂ ಕಾರ್ಡ್‌...