ಭಾರತ, ಏಪ್ರಿಲ್ 15 -- ಬೆಂಗಳೂರು: ಕೋವಿಡ್‌ ಹಗರಣದಲ್ಲಿ ಭಾಗಿಯಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಉನ್ನತ ಮಟ್ಟದ ಅಧಿಕಾರಿಗಳು, ಬೆಂಗಳೂರು ಗ್ರಾಮೀಣ, ಗದಗ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಮೈಖೇಲ್‌ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ. ಬಿಬಿಎಂಪಿಯ ನಾಲ್ಕು ವಿಭಾಗಗಳು ಮತ್ತು ಮೂರು ಜಿಲ್ಲೆಗಳಲ್ಲಿ ಶೇ. 54 ರಷ್ಟು ಅಂದರೆ 157.55 ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಸಮಿತಿ ಪತ್ತೆ ಹಚ್ಚಿದೆ.

ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ತನ್ನ ಎರಡನೇ ವರದಿ ಸಲ್ಲಿಸಿದ್ದು ವರದಿಯ ಅಂಶಗಳು ಬಹಿರಂಗವಾಗಿವೆ. ನ್ಯಾಯಮೂರ್ತಿ ಕುನ್ಹಾ ಅವರು, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಮಾರ್ಚ್‌ 2020 ರಿಂದ ಡಿಸೆಂಬರ್‌ 2022 ರಿಂದ ಅವ್ಯವಹಾರ ನಡೆಸಿರುವ ಜಂಟಿ ಆಯುಕ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತಿತರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡ...