Bangalore, ಮೇ 10 -- ಯೂಟ್ಯೂಬ್‌ನಲ್ಲಿ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳನ್ನು ನೋಡಲು ಸಾಕಷ್ಟು ಜನರು ಇಷ್ಟಪಡುತ್ತಾರೆ. ಇದೇ ರೀತಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ಅಂಥಾಲಜಿ ಥ್ರಿಲ್ಲರ್‌ ತೆಲುಗು ಸಿನಿಮಾ ನೋಡಲು ಬಯಸಿದರೆ ಏಕಮ್‌ ಚಿತ್ರ ನೋಡಬಹುದು. ಬಿಗ್ ಬಾಸ್ ಬ್ಯೂಟಿ ಶ್ವೇತಾ ವರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಇದಾಗಿದೆ. ವ ಈ ಚಿತ್ರದಲ್ಲಿ ಅಭಿರಾಮ್ ವರ್ಮಾ, ತಣಿಕೆಲ್ಲಭರಣಿ, ಅದಿತಿ ಮೈಕಲ್ ಮತ್ತು ಕಲ್ಪಿಕಾ ಗಣೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಂಶಿ ರಾಮ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.

ಏಕಮ್‌ ಸಿನಿಮಾವು ಅಕ್ಟೋಬರ್ 2021ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ವಿಭಿನ್ನ ಪ್ರಯತ್ನ ಎಂದು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದಿತ್ತು. ಇದು ಐಎಂಡಿಬಿಯಲ್ಲಿ 7.2 ರೇಟಿಂಗ್ ಪಡೆದಿದೆ. ಜಾನ್ ಫ್ರಾಂಕ್ಲಿನ್ ಏಕಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಆನಂದ್ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಳ್ಳುತ್ತಾನೆ. ಕೆಲಸ ಕಳ...