ಭಾರತ, ಮಾರ್ಚ್ 9 -- ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿ ಕಾರಣಾಂತರಗಳಿಂದ ಬಿಗ್‌ ಬಾಸ್‌ನಿಂದ ರಂಜಿತ್ ಹೊರಗಡೆ ಬಂದಿದ್ದರು.

ಅದಾದ ನಂತರದಲ್ಲಿ ಬಿಗ್‌ ಬಾಸ್‌ ಫಿನಾಲೆಯಲ್ಲೂ ಕಾಣಿಸಿಕೊಂಡಿದ್ದರು, ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಆದರೆ, ಮದುವೆ ವಿಚಾರ ಪ್ರಸ್ತಾಪ ಮಾಡಿರಲಿಲ್ಲ.

ಇದೀಗ ತಾವು ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರಂಜಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ಹುಡುಗಿಯ ಹೆಸರು ಮಾನಸಾ ಗೌಡ.

ರಂಜಿತ್ ಹಾಗೂ ಮಾನಸಾ ಇಬ್ಬರೂ ಪ್ರೀತಿಸುತ್ತಿದ್ದರು, ಈಗ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆ ಆಗಲಿದ್ದಾರೆ.

ಅದ್ಧೂರಿಯಾಗಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲ ಬಿಗ್‌ ಬಾಸ್‌ ಸ್ಪರ್ಧಿಗಳೂ ಸಹ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದಾರೆ.

ರಂಜಿತ್ ಅವರನ್ನು ವರಿಸಲಿರುವ ಮಾನಸಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇಬ್ಬರೂ ನಿಶ್ಚಿತಾರ್ಥದಂದು ಸಾಂಪ್ರದಾಯಿಕ ಉಡುಗೆಯಲ್ಲಿ ಅಂದವಾಗಿ ಕಾಣಿಸಿಕೊಂ...