Bengaluru, ಮೇ 8 -- ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್, ಶೋ ಮುಗಿಯುವಷ್ಟರಲ್ಲಿ ಅತ್ಯಾಪ್ತ ಸ್ನೇಹಿತರಾದರು.
ಇಡೀ ಕರುನಾಡು ಈ ಜೋಡಿಗೆ ಬಹುಪರಾಕ್ ಹೇಳಿತ್ತು. ದೋಸ್ತಿಗೆ ಇನ್ನೊಂದು ಹೆಸರಾಗಿದ್ದರು. ಶೋ ಮುಗಿದ ಮೇಲೆಯೂ ಈ ಜೋಡಿಯ ನಡುವಿನ ಸ್ನೇಹ ಹಾಗೆಯೇ ಮುಂದುವರಿದಿದೆ.
ಇದೀಗ ಮೊದಲ ಸಲ ಹನುಮಂತ ಲಮಾಣಿಯ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾಕ್ಕೆ ಧನರಾಜ್ ಆಚಾರ್ ಮತ್ತು ಗೋಲ್ಡ್ ಸುರೇಶ್ ಆಗಮಿಸಿದ್ದಾರೆ.
ಚಿಲ್ಲೂರು ಬಡ್ನಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಗೋಲ್ಡ್ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಬಂದರೆ, ಕರಾವಳಿಯಿಂದ ಸಹೋದರರ ಜತೆಗೆ ಕಾರ್‌ನಲ್ಲಿ ಬಂದಿದ್ದರು ಧನರಾಜ್.
ಗೋಲ್ಡ್ ಸುರೇಶ್, ಧನರಾಜ್, ಹನುಮಂತ ಒಂದೆಡೆ ಸೇರುತ್ತಿದ್ದಂತೆ, ಬಿಗ್ ಬಾಸ್ ಮನೆಯ ನೆನಪುಗಳನ್ನು ಮತ್ತೆ ಬಿಚ್ಚಿಟ್ಟಿದ್ದಾರೆ. ಹಾಸ್ಯ ಪ್ರಸಂಗಗಳನ್ನು ನೆನೆದು ನಗಾಡಿದ್ದಾರೆ. ಸಿಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.