Bangalore, ಏಪ್ರಿಲ್ 23 -- ಬಿಗ್‌ಬಾಸ್‌ ರಿಯಾಲಿಟಿ ಶೋಗಳು ಭಾರತದ ಜನಪ್ರಿಯ ಶೋಗಳು. ಟಿಆರ್‌ಪಿಯಲ್ಲಿಯೂ ಈ ಶೋಗಳು ಸಾಕಷ್ಟು ಸಾಧನೆ ಮಾಡಿವೆ. ಬಿಗ್‌ಬಾಸ್‌ ಶೋಗಳು ಇಲ್ಲಿಯವರೆಗೆ ಕಲರ್ಸ್‌ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಮುಂದಿನ ಸೀಸನ್‌ನಿಂದ ಬಿಗ್‌ಬಾಸ್‌ ಮತ್ತು ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋಗಳು ಇನ್ಮುಂದೆ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಲಿದೆಯಂತೆ. ಈ ಹೊಸ ಬೆಳವಣಿಗೆಯು ಕಲರ್ಸ್‌ ಕನ್ನಡದ ಬಿಗ್‌ಬಾಸ್‌ ಕನ್ನಡ ಸೀಸನ್‌ ಮೇಲೆ ಪರಿಣಾಮ ಬೀರುವುದೇ ಕಾದು ನೋಡಬೇಕಿದೆ. ಕಿಚ್ಚ ಸುದೀಪ್‌ ಇಲ್ಲದ ಮುಂದಿನ ರಿಯಾಲಿಟಿ ಶೋ ಯಾವ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

'ಬಿಗ್ ಬಾಸ್' ಮತ್ತು 'ಖತ್ರೋನ್ ಕೆ ಖಿಲಾಡಿ' ಚಾನೆಲ್ ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ಸೋನಿಯಲ್ಲಿ ಹೊಸ ನೆಲೆಯನ್ನು ಕಂಡುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಮಾತುಕತೆಗಳು ಈಗಾಗಲೇ ನಡೆಯುತ್ತಿವೆ.

"ತಂಡವು ಇತ್ತೀಚೆಗೆ ಹೊಸ ಸೀಸನ್‌ನಲ್ಲಿ ಕೆಲಸ ಮಾಡದಿರಲು ನಿ...